ಗ್ರೇಟರ್ ಚೆನ್ನೈ ಕಾರ್ಪೋರೇಷನ್ ಕೌನ್ಸಿಲರ್ ಪತಿ ಕೌನ್ಸಿಲರ್ ಕಚೇರಿಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸುವಂತಿದ್ದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ತಮಿಳುನಾಡು ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ, ಡಿಎಂಕೆ ಕೌನ್ಸಿಲರ್ಗಳು ಜನರ ಸೇವೆ ಮಾಡುವ ಬದಲು ಸಾರ್ವಜನಿಕರನ್ನು ಬೆದರಿಸಿ ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಡಂಗಯ್ಯೂರು ಪ್ರದೇಶದ ಒಯ್ಯತೋಪು ನಿವಾಸಿ ದೇವಿ ಎಂಬವರಿಗೆ ಚೆನ್ನೈನ ಕೌನ್ಸಿಲರ್ ಕೆ. ಶರ್ಮಿಳಾ ಗಾಂಧಿ ಕಚೇರಿಯಲ್ಲಿ ನಿಂದಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಕೌನ್ಸಿಲರ್ ಒಂದು ಮೂಲೆಯಲ್ಲಿ ಕುಳಿತಿರುವುದು ಕಂಡುಬಂದರೆ ಕೌನ್ಸಿಲರ್ ಸ್ಥಾನದಲ್ಲಿ ಪತಿ ಕರುಣಾನಿಧಿ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಮಹಿಳೆಯನ್ನು ನಿಂದಿಸುತ್ತಿರುವವರು ಕರುಣಾನಿಧಿ ಬೆಂಬಲಿಗರು ಎನ್ನಲಾಗಿದೆ.