ಸುಮಾರು 20 ವರ್ಷ ಆಸುಪಾಸಿನ ಯುವಕನ ಶವವೊಂದು ಮದ್ರಾಸ್ನ ಐಐಟಿ ಕ್ಯಾಂಪಸ್ನಲ್ಲಿ ಪತ್ತೆಯಾಗಿದೆ. ಮೃತದೇಹವು ಭಾಗಶಃ ಸುಟ್ಟು ಕರಕಲಾಗಿದೆ.
ಮೃತ ವ್ಯಕ್ತಿಯನ್ನ ಉನ್ನಿ ಕೃಷ್ಣನ್ ನಾಯರ್ ಎಂದು ಗುರುತಿಸಲಾಗಿದೆ. ಈತ ಐಐಟಿ ಮದ್ರಾಸ್ನಲ್ಲಿ ಅತಿಥಿ ಉಪನ್ಯಾಸಕ ಹಾಗೂ ಸಂಶೋಧನಾ ವಿದ್ಯಾರ್ಥಿಯಾಗಿಯೂ ಆಗಿದ್ದ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯ ವೇಳೆ ಪೊಲೀಸರಿಗೆ ಈತನ ಕೊಣೆಯಲ್ಲಿದ್ದ ಪುಸ್ತಕವೊಂದರಲ್ಲಿ ಸೂಸೈಡ್ ನೋಟ್ ಸಿಕ್ಕಿರೋದ್ರಿಂದ ಇದೊಂದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಅಂದಾಜಿಸಲಾಗಿದೆ.
ಮೃತ ನಾಯರ್ ಕೇರಳ ಮೂಲದವನಾಗಿದ್ದು ಈತನ ತಂದೆ ಇಸ್ರೋದಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ.
ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಹಾಕಿ ಕ್ರೀಡಾಂಗಣದಲ್ಲಿ ಈ ಶವ ಇರೋದನ್ನ ನೋಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕೊಟ್ಟುಪುರಂ ಠಾಣಾ ಪೊಲೀಸರು ಮೃತದೇಹವನ್ನ ವಶಕ್ಕೆ ಪಡೆದಿದ್ದಾರೆ. ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.
ಮೃತ ವ್ಯಕ್ತಿಯ ಮುಖ ಹಾಗೂ ಇತರೆ ದೇಹದ ಭಾಗಗಳು ಭಾಗಶಃ ಸುಟ್ಟು ಹೋಗಿದೆ ಎಂದು ಪೊಲೀಸರು ಹೇಳಿದ್ದಾರೆ.