alex Certify ಸೈಡ್‌ ವೀಲಿಂಗ್ ಮಾಡಿ ದಾಖಲೆ ಬರೆದ ರಿಕ್ಷಾ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಡ್‌ ವೀಲಿಂಗ್ ಮಾಡಿ ದಾಖಲೆ ಬರೆದ ರಿಕ್ಷಾ ಚಾಲಕ

ಗಿನ್ನೆಸ್ ವಿಶ್ವದಾಖಲೆಯೊಂದಕ್ಕೆ ಭಾಜನರಾದ ಚೆನ್ನೈನ ಆಟೋ ಚಾಲಕರೊಬ್ಬರು ತಮ್ಮ ರಿಕ್ಷಾವನ್ನು ಎರಡು ಚಕ್ರಗಳ ಮೇಲೆ ಓಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಜಗದೀಶ್‌ ಮಣಿ ಹೆಸರಿನ ಈ ಚಾಲಕ ಅಕ್ಟೋಬರ್‌ 6 ಶೇರ್‌ ಮಾಡಲಾದ, 2016ರ ಕ್ಲಿಪ್ ಒಂದರಲ್ಲಿ ತಮ್ಮ ತ್ರಿಚಕ್ರ ವಾಹನವನ್ನು 2.2 ಕಿಮೀಗಳಷ್ಟು ದಾಖಲೆಯ ದೂರದವರೆಗೂ ಎರಡೇ ಚಕ್ರಗಳ ಮೇಲೆ ಓಡಿಸಿದ್ದನ್ನು ನೋಡಬಹುದಾಗಿದೆ.

ಪುರುಷರ ಲೈಂಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾ ಸೋಯಾ……?

“ಇದು ಎಪಿಕ್ ಆಟೋರಿಕ್ಷಾ ಸೈಡ್‌ ವೀಲೀ. ಚೆನ್ನೈನ ಆಟೋರಿಕ್ಷಾ ಚಾಲಕ ಜಗದೀಶ್‌ ಎಂ ಅವರು ತಮ್ಮ ಟುಕ್‌ಟುಕ್‌ ಅನ್ನು ದಾಖಲೆಯ ದೂರಕ್ಕೆ ಸೈಡ್‌ ವೀಲಿ ಮಾಡಿದ್ದಾರೆ,” ಎಂದು ಕ್ಲಿಪ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಶೇರ್‌ ಮಾಡಲಾಗಿದೆ.

31 ವರ್ಷದ ಜಗದೀಶ್ ತಮ್ಮ ಸ್ಟಂಟ್‌ನಿಂದ ರಸ್ತೆಯಲ್ಲಿ ಹೋಗುತ್ತಿದ್ದ ಜನರನ್ನು ದಂಗುಬಡಿಸಿದ್ದಾರೆ.

ಸೆಲ್ಫಿಗೆ ಪೋಸ್ ನೀಡಿ ವೈರಲ್ ಆಗಿದ್ದ ಗೊರಿಲ್ಲಾ ಇನ್ನಿಲ್ಲ

“ನಾನು ಹಾಗೆ ಮಾಡುವುದನ್ನು ಆನಂದಿಸುತ್ತೇನೆ. ನನ್ನ ಆಟೋದಲ್ಲಿ ನಾನು ಮಾಡುವ ಸ್ಟಂಟ್‌ಗಳಿಗಿಂತ ಬೇರಾವುದೂ ನನ್ನನ್ನು ಹೆಚ್ಚು ಖುಷಿಯಾಗಿಸುವುದಿಲ್ಲ. ಇದು ಎಲ್ಲರನ್ನೂ ದಂಗುಬಡಿಸುತ್ತದೆ. ದಾರಿಹೋಕರು ನಾನು ಆಟೋರಿಕ್ಷಾವನ್ನು ಎರಡು ಚಕ್ರದಲ್ಲಿ ಓಡಿಸುವುದನ್ನು ಬೆರಗಾಗಿ ನೋಡುತ್ತಾರೆ,” ಎಂದು ಮಣಿ ಹೇಳುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...