alex Certify ಮತ್ತು ಬರುವ ತೀರ್ಥ ನೀಡಿ ಟಿವಿ ಚಾನೆಲ್ ನಿರೂಪಕಿ ಮೇಲೆ ಅರ್ಚಕನಿಂದ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತು ಬರುವ ತೀರ್ಥ ನೀಡಿ ಟಿವಿ ಚಾನೆಲ್ ನಿರೂಪಕಿ ಮೇಲೆ ಅರ್ಚಕನಿಂದ ಅತ್ಯಾಚಾರ

Chennai: Female TV anchor accuse temple priest of raping her after giving sedative laced 'theerth'

ಅರ್ಚಕನೊಬ್ಬ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆಂದು ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿಯೊಬ್ಬರು ಚೆನ್ನೈನ ವಿರುಗಂಬಾಕ್ಕಂನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರದ ಪ್ರಸಿದ್ಧ ಅಮ್ಮನ್ ದೇವಾಲಯವೊಂದರ ಅರ್ಚಕರ ವಿರುದ್ಧ ಪ್ರಜ್ಞೆ ತಪ್ಪುವ ತೀರ್ಥವನ್ನು ಕುಡಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಪೊಲೀಸರ ಪ್ರಕಾರ, ಸಾಲಿಗ್ರಾಮದ ಸಂತ್ರಸ್ತೆ ತನ್ನ ದೂರಿನಲ್ಲಿ, ತಾನು ಆಧ್ಯಾತ್ಮಿಕವಾಗಿ ಒಲವು ಹೊಂದಿರುವ ಮಹಿಳೆಯಾಗಿರುವುದರಿಂದ ಚೆನ್ನೈನ ಪ್ಯಾರಿಸ್ ಕಾರ್ನರ್ ಪ್ರದೇಶದಲ್ಲಿರುವ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡುತ್ತಿದ್ದೆ. ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಮುನಿಸ್ವಾಮಿಯೊಂದಿಗೆ ಪರಿಚಯವಾಯಿತು..

ಬಳಿಕ ಕಾರ್ತಿಕ್ ಮುನಿಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಪ್ರವಚನ ಹಾಗೂ ಕಾರ್ಯಕ್ರಮಗಳ ಕುರಿತು ವಾಟ್ಸಾಪ್ ನಲ್ಲಿ ಕಾಲಕಾಲಕ್ಕೆ ಸಂದೇಶ ಕಳುಹಿಸುತ್ತಿದ್ದರು. ಪರಿಚಯವಾಗಿದ್ದರಿಂದ ತಾನು ದೇವಸ್ಥಾನಕ್ಕೆ ಬಂದಾಗಲೆಲ್ಲಾ ಗರ್ಭಗುಡಿಗೆ ಕರೆದೊಯ್ದು ವಿಶೇಷ ದರ್ಶನ ನೀಡುತ್ತಿದ್ದರು ಎಂದು ಹೇಳಿದ್ದಾಳೆ.

ದಿನಗಳು ಕಳೆದಂತೆ ಒಂದು ದಿನ ಆಕೆ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಆಕೆಯ ಮನೆ ಕಡೆಯೇ ತಾನು ಹೋಗುತ್ತಿದ್ದು ಮನೆಗೆ ಬಿಡುವುದಾಗಿ ಹೇಳಿ ತನ್ನ ಬೆಂಜ್ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ನಂತರ ಆಕೆಗೆ ನಿದ್ರಾಜನಕ ಲೇಪಿತ ‘ತೀರ್ಥ’ವನ್ನು ನೀಡಿದ್ದ. ಕುಡಿದ ನಂತರ ಆಕೆ ಪ್ರಜ್ಞಾಹೀನಳಾಗಿದ್ದಳು ಮತ್ತು ಆಕೆಯ ಮೇಲೆ ಅರ್ಚಕ ಅತ್ಯಾಚಾರವೆಸಗಿದ್ದಾನೆ. ಇದಾದ ಬಳಿಕ ಆಕೆಯನ್ನು ದೇವಸ್ಥಾನದಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಅಂದಿನಿಂದ ಕಾರ್ತಿಕ್ ಮುನಿಸ್ವಾಮಿ ಆಗಾಗ ತನ್ನ ಮನೆಗೆ ಬರುತ್ತಿದ್ದು, ಗರ್ಭಿಣಿಯಾಗಿದ್ದಾಗಿ ನಿರೂಪಕಿ ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ಯಾವುದೋ ನೆಪದಲ್ಲಿ ಆಕೆಯನ್ನು ವಡಪಳನಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ. ಇದಾದ ಬಳಿಕ ಆತ ತನ್ನನ್ನು ಲೈಂಗಿಕತೆಗೆ ಒತ್ತಾಯಿಸುತ್ತಿದ್ದ ಎಂದು ಹೇಳಿದ್ದಾರೆ.

ನಿರೂಪಕಿ ನೀಡಿದ ದೂರಿನ ಆಧಾರದ ಮೇಲೆ ವಿರುಗಂಬಾಕ್ಕಂ ಮಹಿಳಾ ಪೊಲೀಸರು ತನಿಖೆ ನಡೆಸಿದ್ದಾರೆ. ಇದಾದ ನಂತರ ಪೊಲೀಸರಿಗೆ ದೇವಸ್ಥಾನದ ಅರ್ಚಕ ಕಾರ್ತಿಕ್ ಮುನಿಸ್ವಾಮಿ ಮೊಬೈಲ್ ನಲ್ಲಿ ಆಕೆಯ ಜತೆಗಿರುವ ಖಾಸಗಿ ಚಿತ್ರಗಳು ಹಾಗೂ ವಿಡಿಯೋಗಳು ಪತ್ತೆಯಾಗಿವೆ. ಕಾರ್ತಿಕ್ ಮುನಿಸಾಮಿ ವಿರುದ್ಧ 6 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇಂಜಿನಿಯರಿಂಗ್ ಮುಗಿಸಿದ ಆಕೆ ಚೆನ್ನೈನ ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...