ಚೈನೀಸ್ ಹಾಗೂ ಜಂಕ್ಫುಡ್ಗಳನ್ನು ಇಷ್ಟ ಪಡುವವರಲ್ಲಿ ಬಹುತೇಕರು ಪಾಸ್ತಾ ಪ್ರಿಯರಾಗಿರುತ್ತಾರೆ. ಆದರೆ ಎಂದಾದರೂ ಹಪ್ಪಳದಿಂದ ತಯಾರಿಸಿದ ಪಾಸ್ತಾವನ್ನು ಸವಿದಿದ್ದೀರೇ..? ಇಲ್ಲ ಎಂದಾದಲ್ಲಿ ನೀವು ಈ ವಿಡಿಯೋವನ್ನು ನೋಡಲೇಬೇಕು.
ಶೆಫ್ ಸರಂಶ್ ಗೋಲಿಯಾ ಎಂಬವರು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಪಾಪಡ್ ಲಸಾನಿಯಾ ಮಾಡೋದು ಹೇಗೆ ಅನ್ನೋದನ್ನು ಕಲಿಸಿದ್ದಾರೆ. ಈ ವಿಡಿಯೋ ಇದೀಗ ನೆಟ್ಟಿಗರಿಂದ ಮೆಚ್ಚುಗೆ ಗಳಿಸುತ್ತಿದೆ.
ಆಗಸ್ಟ್ 25ರಂದು ಈ ವಿಡಿಯೋ ಶೇರ್ ಮಾಡಲಾಗಿದ್ದು ಕೇವಲ 1 ದಿನದ ಅಂತರದಲ್ಲಿ 9 ಸಾವಿರಕ್ಕೂ ಅಧಿಕ ಲೈಕ್ಸ್ ಸಂಪಾದಿಸುತ್ತಾ ಮುನ್ನುಗ್ಗುತ್ತಿದೆ. ಅನೇಕರು ಈ ಹೊಸ ಮಾದರಿಯ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ದೇಸಿ ಲಸಾನಿಯಾ ಪ್ರಯೋಗವೇ ಉತ್ತಮವಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.
https://www.instagram.com/p/CS9l1VtDVGt/?utm_source=ig_embed&utm_campaign=embed_video_watch_again