ಬ್ರಿಟಿಷ್ ನಿರ್ಗಮಿತ ಕಾಲದ ಭಾರತದಲ್ಲಿ ನಶಿಸಿ ಹೋದ ಏಷ್ಯಾಟಿಕ್ ಚೀತಾಗಳ ಬದಲಿಗೆ ಅವುಗಳ ಆಫ್ರಿಕನ್ ಸಹೋದರರನ್ನು ದೇಶದ ಕಾಡುಗಳಿಗೆ ತಂದು ಬಿಡಲು ಕೇಂದ್ರದ ಪರಿಸರ ಇಲಾಖೆ ಸಜ್ಜಾಗಿದೆ.
ಮೊದಲ ಬ್ಯಾಚ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಎಂಟು ಚೀತಾಗಳನ್ನು ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಅಭಯಾರಣ್ಯಕ್ಕೆ ತಂದು ಬಿಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ 50 ಚೀತಾಗಳನ್ನು ದೇಶದ ಅನೇಕ ಅಭಯಾರಣ್ಯಗಳಿಗೆ ಕರೆತರಲಾಗುವುದು.
BIG NEWS: ಕೋವಿಡ್ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮೈಲುಗಲ್ಲು ಸೃಷ್ಠಿಸಿದ ಕರ್ನಾಟಕ
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) 19ನೇ ಸಭೆಯಲ್ಲಿ ಮಾತನಾಡಿದ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್, ಚೀತಾಗಳನ್ನು 2021ರಲ್ಲೇ ದೇಶಕ್ಕೆ ಕರೆತರುವ ಯೋಜನೆ ಇತ್ತಾದರೂ ಕೋವಿಡ್-19 ಎರಡನೇ ಅಲೆಯಿಂದಾಗಿ ತಡವಾಗಿದೆ ಎಂದಿದ್ದಾರೆ.
ಮಧ್ಯ ಪ್ರದೇಶದ ಶೆಯೋಪುರ ಮತ್ತು ಮೊರೇನಾ ಜಿಲ್ಲೆಗಳಲ್ಲಿರುವ ಕುನೋ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಚೀತಾಗಳನ್ನು ಪರಿಚಯಿಸಲು ಭಾರತ ಸರ್ಕಾರ ಯೋಜನೆಗಳನ್ನು ಹೊಂದಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ ಚೀತಾಗಳನ್ನು ಹೀಗೆ ಸ್ಥಳಾಂತರಿಸುವ ಮೊದಲ ಅಭ್ಯಾಸವಾಗಿರುವ ಈ ಕ್ರಿಯೆಯ ಭಾಗವಾಗಿ ವರ್ಷಾಂತ್ಯಕ್ಕೆ 12-15 ಚೀತಾಗಳನ್ನು ಭಾರತಕ್ಕೆ ಕರೆತರಲಾಗುವುದು.