ಪೇಟಿಎಂ ಈಗ ಕೇವಲ ಹಣಕಾಸು ವ್ಯವಹಾರ ನಡೆಸುವುದು, ಶಾಪಿಂಗ್ ಮಾಡುವುದಕ್ಕೆ, ಬಿಲ್ ಪಾವತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಹೊಸ ಹೊಸ ಉಪಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದೀಗ ಯಾವುದೇ ರೈಲಿನ ಲೈವ್ ರನ್ನಿಂಗ್ ಸ್ಥಿತಿಯನ್ನು ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿದೆ.
ರೈಲು ಪ್ರಯಾಣಿಕರಿಗೆ ತಮ್ಮ ರೈಲುಗಳ ರಿಯಲ್ ಟೈಮ್ ತಿಳಿಯಲು ಸಹಾಯ ಮಾಡಲು ಹಲವಾರು ಅಪ್ಲಿಕೇಶನ್ಗಳು ಇವೆ. ಪೇಟಿಎಂ ಕೂಡ ತನ್ನ ಬಳಕೆದಾರರಿಗೆ ಅಪ್ಲಿಕೇಶನ್ ಮೂಲಕ ರೈಲು ಟಿಕೆಟ್ಗಳನ್ನು ಬುಕ್ ಮಾಡಲು ಸಹಾಯ ಮಾಡುತ್ತಿದೆ. ಇತ್ತೀಚೆಗೆ, ರಿಯಲ್ ಟೈಮ್ ಮಾಹಿತಿ ಒದಗಿಸುವ ಸೇವೆ ಆರಂಭಿಸಿದೆ.
ಹಂತ 1: ರೈಲು ಸಂಖ್ಯೆ ಅಥವಾ ರೈಲಿನ ಹೆಸರನ್ನು ನಮೂದಿಸುವುದು.
ಹಂತ 2: ಬೋರ್ಡಿಂಗ್ ಸ್ಟೇಷನ್ ಆಯ್ಕೆಮಾಡುವುದು.
ಹಂತ 3: ನಮೂದಿಸಿದ ದಿನಾಂಕಗಳಿಂದ ಬೋರ್ಡಿಂಗ್ ದಿನಾಂಕವನ್ನು ಆಯ್ಕೆ ಮಾಡಿ ಮತ್ತು ʼಲೈವ್ ಸ್ಥಿತಿಯನ್ನು ಪರಿಶೀಲಿಸಿ’ ಕ್ಲಿಕ್ ಮಾಡಿ.
ಹಂತ 4: ನೀವು ಈಗ ನಿಮ್ಮ ರೈಲು ಎಲ್ಲಿದೆ ಎಂದು ಗುರುತಿಸಬಹುದು.
ನೀವು ಅದೇ ಅಪ್ಲಿಕೇಶನ್ ನಲ್ಲಿ ರೈಲನ್ನು ಬುಕ್ ಮಾಡಬಹುದು, ಇದು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದಿಂದ ಸೀಟುಗಳ ಲಭ್ಯತೆಯ ಬಗ್ಗೆ ರಿಯಲ್ ಟೈಮ್ ಅಪ್ಡೇಟ್‌ಗಳನ್ನು ಪಡೆಯುತ್ತದೆ.