ಛತ್ತೀಸ್‌ಗಢದ ಜಾಂಜ್ ಗಿರ್-ಚಂಪಾ ಪ್ರದೇಶದಲ್ಲಿ ಎರಡನೇ ಮದುವೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಮತ್ತು ಆಕೆಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಥಳಿತಕ್ಕೊಳಗಾದ ವ್ಯಕ್ತಿ ತನ್ನ ಮೊದಲ ಹೆಂಡತಿಯನ್ನು ಆಕೆಯ ಪೋಷಕರ ಮನೆಯಲ್ಲಿ ಬಿಟ್ಟು ಎರಡನೇ ಮದುವೆಯಾಗುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದು ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಪತ್ನಿ ಸಂಬಂಧಿಕರೊಂದಿಗೆ ಸೇರಿ ಥಳಿಸಿದ್ದಾರೆ.
ಮೊದಲ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ದೇವಸ್ಥಾನದಲ್ಲಿ ಥಳಿಸಿದ್ದಾರೆ. ಕೂಡಲೇ, ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಗಲಾಟೆ ನಿಲ್ಲಿಸಿದ್ದು, ಪತಿ ಮತ್ತು ಅವನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್ ದಾಖಲಿಸಿದ್ದಾರೆ.
ವರನನ್ನು ಸೋಮ್ ಪ್ರಕಾಶ್ ನಾರಾಯಣ್ ಜೈಸ್ವಾಲ್ ಎಂದು ಗುರುತಿಸಲಾಗಿದೆ, 2017 ರಲ್ಲಿ ತನ್ನ ಮೊದಲ ಪತ್ನಿ ದಾಮಿನಿ ಜೈಸ್ವಾಲ್ ಅವರನ್ನು ವಿವಾಹವಾಗಿದ್ದು, ಮದುವೆಯ ನಂತರ ದಾಮಿನಿ ತನ್ನ ಮಾವ, ಅತ್ತೆ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ಆರೋಪಿಸಿದ್ದಾರೆ.
ಮಾವ ದಾಮಿನಿ ತವರು ಮನೆಗೆ ಹೋಗಿ 2 ಲಕ್ಷ ರೂಪಾಯಿ ನೀಡದಿದ್ರೆ ಮಗಳನ್ನು ಕರೆದುಕೊಂಡು ಹೋಗುವುದಿಲ್ಲ ಎಂದು ಹೇಳಿದ್ದಾನೆ. ಆಕೆಯ ಕುಟುಂಬ 2018 ರಲ್ಲಿ ಪಂಚಾಯಿತಿ ನಡೆಸಿದ್ದರೂ, ಪ್ರಯೋಜನವಾಗಲಿಲ್ಲ. ಏಪ್ರಿಲ್ 3 ರಂದು ಸೋಮ್ ಪ್ರಕಾಶ್ ಹೊಸ ಹುಡುಗಿಯನ್ನು ಮದುವೆಯಾಗಲು ದೇವಸ್ಥಾನಕ್ಕೆ ಬಂದಾಗ, ಮೊದಲ ಪತ್ನಿ ಮತ್ತು ಆಕೆಯ ಕುಟುಂಬ ಸದಸ್ಯರು ಆತನನ್ನು ಥಳಿಸಿದ್ದಾರೆ.