alex Certify ಮಂಗಳೂರಲ್ಲಿ ಟೇಕಾಫ್ ಗೆ ಸಿದ್ಧವಾಗಿದ್ದ ವಿಮಾನ ಸಂಚಾರ ಹಠಾತ್ ಸ್ಥಗಿತ: ಭದ್ರತೆ ಬಗ್ಗೆ ಯುವಕ –ಯುವತಿ ಚಾಟಿಂಗ್ ಅವಾಂತರದಿಂದ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳೂರಲ್ಲಿ ಟೇಕಾಫ್ ಗೆ ಸಿದ್ಧವಾಗಿದ್ದ ವಿಮಾನ ಸಂಚಾರ ಹಠಾತ್ ಸ್ಥಗಿತ: ಭದ್ರತೆ ಬಗ್ಗೆ ಯುವಕ –ಯುವತಿ ಚಾಟಿಂಗ್ ಅವಾಂತರದಿಂದ ಆತಂಕ

ಮಂಗಳೂರು: ಮಂಗಳೂರು ಇಂಟನ್ ನ್ಯಾಷನಲ್ ಏರ್ಪೋರ್ಟ್ ನಲ್ಲಿ ಯುವಕ, ಯುವತಿ ಚಾಟಿಂಗ್ ಅವಾಂತರದಿಂದ ಟೇಕಾಫ್ ಗೆ  ಸಿದ್ಧವಾಗಿದ್ದ ವಿಮಾನ ಸಂಚಾರ ಸ್ಥಗಿತಗೊಳಿಸಿ ತಪಾಸಣೆ ನಡೆಸಲಾಗಿದೆ.

ಮಂಗಳೂರು ಏರ್ಪೋರ್ಟ್ ನಲ್ಲಿ ಯುವಕ ಮತ್ತು ಯುವತಿ ನಡುವಿನ ಚಾಟಿಂಗ್ ಆತಂಕಕ್ಕೆ ಕಾರಣವಾಗಿದೆ. ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ, ಯುವತಿ ಚಾಟ್ ಮಾಡಿದ್ದಾರೆ. ಭದ್ರತೆ ಬಗ್ಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ಅವರು ಚಾಟಿಂಗ್ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳಲು ಬಂದಿದ್ದ ಯುವತಿ ಹಾಗೂ ಮಂಗಳೂರಿನಿಂದ ಮುಂಬೈಗೆ ತೆರಳಲು ಬಂದಿದ್ದ ಯುವಕ ಚಾಟಿಂಗ್ ಮಾಡಿದ್ದಾರೆ. ಇವರು ಪರಿಚಯಸ್ಥರೇ ಆಗಿದ್ದು, ಬೇರೆ ಬೇರೆ ವಿಮಾನದಲ್ಲಿ ಪ್ರಯಾಣಕ್ಕೆ ಸಿದ್ಧತೆ ನಡೆಸಿದ್ದರು. ಯುವಕ ಕೂತಿದ್ದ ವಿಮಾನ ರನ್ ವೇನಲ್ಲಿ ಟೇಕಾಫ್ ಗೆ ಸಿದ್ಧವಾಗಿತ್ತು. ಬೆಂಗಳೂರಿಗೆ ತೆರಳಲು ನಿಲ್ದಾಣದಲ್ಲಿ ಕುಳಿತಿದ್ದ ಯುವತಿ ಜೊತೆ ಆತನೊಂದಿಗೆ ಚಾಟಿಂಗ್ ಮಾಡುತ್ತಿದ್ದಳು. ಚಾಟಿಂಗ್ ನಲ್ಲಿ ಭದ್ರತೆಗೆ ಅಪಾಯ ಒಡ್ಡುವ ವಿಚಾರಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಯುವತಿಯ ಚಾಟಿಂಗ್ ಗಮನಿಸಿದ ಪ್ರಯಾಣಿಕ ಏರ್ಪೋರ್ಟ್ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದ. ಮುಂಬೈ ವಿಮಾನ ಸಂಚಾರ ತಡೆದು ಪ್ರಯಾಣಿಕರನ್ನು ಇಳಿಸಿ ತಪಾಸಣೆ ಮಾಡಲಾಗಿದೆ. ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ತಮಾಷೆಗಾಗಿ ಈ ರೀತಿ ಮಾಡಿರುವುದಾಗಿ ಯುವಕ ಮತ್ತು ಯುವತಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...