alex Certify ನಿಮ್ಮ ಪ್ರಾದೇಶಿಕ ಭಾಷೆಯಲ್ಲಿ ಆಧಾರ್ ಕಾರ್ಡ್ ಬೇಕೆಂದ್ರೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಪ್ರಾದೇಶಿಕ ಭಾಷೆಯಲ್ಲಿ ಆಧಾರ್ ಕಾರ್ಡ್ ಬೇಕೆಂದ್ರೆ ಹೀಗೆ ಮಾಡಿ

Aadhaar card news: Step-by-side guide to update name, address, mobile number  in regional language

ಆಧಾರ್ ಕಾರ್ಡ್ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಎಲ್ಲ ಭಾರತೀಯರಿಗೆ ಇದು ಅನಿವಾರ್ಯವಾಗಿದೆ. ಈ ಹಿಂದೆ  ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಆಧಾರ್ ಕಾರ್ಡ್ ನೀಡಲಾಗ್ತಿತ್ತು. ಆದ್ರೀಗ ನಿಮ್ಮ ಪ್ರಾದೇಶಿಕ ಭಾಷೆಯಲ್ಲೂ ನೀವು ಆಧಾರ್ ಕಾರ್ಡ್ ಪಡೆಯಬಹುದು.

ಕನ್ನಡ, ಅಸ್ಸಾಮಿ, ಉರ್ದು, ಪಂಜಾಬಿ, ತಮಿಳು, ತೆಲುಗು, ಹಿಂದಿ, ಬೆಂಗಾಲಿ, ಇಂಗ್ಲಿಷ್, ಗುಜರಾತಿ, ಒರಿಯಾ, ಮಲಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ಆಧಾರ್ ಕಾರ್ಡ್ ಲಭ್ಯವಿದೆ. ಈಗಿರುವ ಆಧಾರ್ ಕಾರ್ಡನ್ನು ನೀವು ನವೀಕರಿಸಬಹುದು. ನವೀಕರಿಸಲು ಒಂದರಿಂದ ಎರಡು ವಾರಗಳನ್ನು ತೆಗೆದುಕೊಳ್ಳುತ್ತದೆ. ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಭಾಷೆಯನ್ನು ನವೀಕರಿಸಬಹುದಾಗಿದೆ. ಆಧಾರ್ ನವೀಕರಣಕ್ಕಾಗಿ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಮೊದಲು ಆಧಾರ್ ಕಾರ್ಡ್‌ನ ಅಧಿಕೃತ ವೆಬ್‌ಸೈಟ್ https://uidai.gov.in/ ಗೆ ಭೇಟಿ ನೀಡಬೇಕು. ಅಲ್ಲಿ ಆಧಾರ್ ಕಾರ್ಡ್ ನವೀಕರಣದ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅದರ ಮೇಲೆ ಕ್ಲಿಕ್ ಮಾಡಿ. ಅಲ್ಲಿ Update demographics data & check status ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ವಿಂಡೋ ತೆರೆಯುತ್ತದೆ. ಅಲ್ಲಿ ಲಾಗಿನ್ ಮಾಡಿ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ನಮೂದಿಸಬೇಕು. ಇದರ ನಂತರ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

ಒಟಿಪಿ ಪರಿಶೀಲಿಸಿದ ನಂತರ ಹೊಸ ಪುಟದಲ್ಲಿ ಜನಸಂಖ್ಯಾ ಡೇಟಾವನ್ನು ನಮೂದಿಸಬೇಕಾಗುತ್ತದೆ. ನಂತ್ರ ಪ್ರದೇಶದ ಭಾಷೆಯನ್ನು ಆಯ್ಕೆ ಮಾಡಬೇಕು. ನಿಮ್ಮ ಹೆಸರು, ವಿಳಾಸ ಸ್ವಯಂ ಆಯ್ಕೆಯಾಗುತ್ತದೆ. ನಿಮ್ಮ ಹೆಸರು ಕಾಗುಣಿತ, ಸಂಖ್ಯೆ ಇತ್ಯಾದಿಗಳನ್ನು ಪರಿಶೀಲಿಸಿ ಸಲ್ಲಿಸಿ. ನಂತ್ರ ಶುಲ್ಕ ಪಾವತಿ ಮಾಡಬೇಕು. ನಂತ್ರ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಓಕೆ ಕ್ಲಿಕ್ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...