alex Certify BREAKING : `ಚಂದ್ರಯಾನ-3’ ಬಿಗ್ ಸಕ್ಸಸ್ : ಚಂದ್ರನ ಅಂಗಳಕ್ಕೆ ಐತಿಹಾಸಿಕ ಹೆಜ್ಜೆ ಇಟ್ಟ `ವಿಕ್ರಮ್ ಲ್ಯಾಂಡರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : `ಚಂದ್ರಯಾನ-3’ ಬಿಗ್ ಸಕ್ಸಸ್ : ಚಂದ್ರನ ಅಂಗಳಕ್ಕೆ ಐತಿಹಾಸಿಕ ಹೆಜ್ಜೆ ಇಟ್ಟ `ವಿಕ್ರಮ್ ಲ್ಯಾಂಡರ್’

ಬೆಂಗಳೂರು : ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 (Chandrayaan-3) ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ (Vikram Lander) ಸಾಫ್ಟ್ ಲ್ಯಾಂಡಿಂಗ್ (Soft landing) ಯಶಸ್ವಿಯಾಗಿದೆ. ಈ ಮೂಲಕ ಭಾರತ ಅಮೆರಿಕ, ರಷ್ಯಾ, ಚೀನಾದ ಬಳಿಕ ಐತಿಹಾಸಿಕ ಸಾಧನೆ ಮಾಡಿದೆ.

ಭಾರತೀಯ ಬಾಹ್ಯಾಕಾಶ ನೌಕೆ ಸಂಜೆ 6.04 ಗಂಟೆಗೆ ಚಂದ್ರನ ಚಂದ್ರನ ದಕ್ಷಿಣ ದ್ರುವನ್ನು ತಲುಪಿದೆ.ಸಂಜೆ 5.45 ರಿಂದಲೇ ವಿಕ್ರಮ್ ಲ್ಯಾಂಡರ್ ನ ವೇಗವನ್ನು ತಗ್ಗಿಸುವ ಪ್ರಕ್ರಿಯೆ ಆರಂಭಿಸಿ ಚಂದ್ರನ ದಕ್ಷಿಣ ದ್ರುವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ.ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಮೂರನೇ ಚಂದ್ರಯಾನದಲ್ಲಿ ಚಂದ್ರನ ಸ್ಪರ್ಶಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವ ತಲುಪಿದ ವಿಶ್ವದ ಮೊದಲ ದೇಶ ಭಾರತವಾಗಿದೆ.

ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಿದ್ದು, ಮುಂದುವರೆದು ಚಂದ್ರನಲ್ಲಿನ ಮಾಹಿತಿಗಳನ್ನು ನೇರವಾಗಿ ರವಾನಿಸಲಿದೆ. ಚಂದ್ರಯಾನ -3 ರ ಸಂವಹನದಲ್ಲಿ ಲ್ಯಾಂಡರ್ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಇದು ಲ್ಯಾಂಡರ್ನಿಂದ ಹೊರಬಂದ ರೋವರ್ನೊಂದಿಗೆ ಸಂವಹನ ನಡೆಸುತ್ತದೆ. ರೋವರ್ ಹೊರತುಪಡಿಸಿ, ಇದು ಚಂದ್ರಯಾನ 2 ನಲ್ಲಿ ಉಡಾವಣೆಯಾದ ಆರ್ಬಿಟರ್ನೊಂದಿಗೆ ಸಂವಹನ ನಡೆಸುತ್ತದೆ. ಇಸ್ರೋ ಲ್ಯಾಂಡರ್ ಮಾಡ್ಯೂಲ್ನಲ್ಲಿ ಪ್ರಮುಖ ಪೇಲೋಡ್ಗಳನ್ನು ಅಳವಡಿಸಿದೆ. ಇವುಗಳಲ್ಲಿ ಪ್ರಮುಖವಾದುದು ಚಂದ್ರನ ಅತಿಸೂಕ್ಷ್ಮ ಅಯಾನುಗೋಳ ಮತ್ತು ವಾತಾವರಣದ ರೇಡಿಯೋ ಅಂಗರಚನಾಶಾಸ್ತ್ರ-ರಂಭಾ-ಡಿಎಫ್ಆರ್ಎಸ್. ಇದು ಅಲ್ಲಿ ಇರುವ ಅಯಾನುಗಳು ಮತ್ತು ಎಲೆಕ್ಟ್ರಾನ್ ಗಳ ಮಟ್ಟವನ್ನು ಮತ್ತು ಕಾಲಾನಂತರದಲ್ಲಿ ಅವುಗಳಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅಧ್ಯಯನ ಮಾಡುತ್ತದೆ ಮತ್ತು ಮಾಹಿತಿಯನ್ನು ಸಂಗ್ರಹಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...