ಇಸ್ರೋ ನಿನ್ನೆ ಯಶಸ್ವಿಯಾಗಿ ಚಂದ್ರಯಾನ 3ಯನ್ನು ಹೊತ್ತ ನೌಕೆಯನ್ನು ರಾಕೆಟ್ ಮೂಲಕ ಉಡಾವಣೆ ಮಾಡಿದೆ. ಅನೇಕರು ಈ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ, ಟಿವಿಗಳಲ್ಲಿ ಕಣ್ತುಂಬಿಕೊಂಡಿದ್ದಾರೆ.
ಇನ್ನೂ ಅನೇಕರು ಶ್ರೀಹರಿಕೋಟಾದಿಂದಲೇ ಈ ದೃಶ್ಯವನ್ನು ವೀಕ್ಷಿಸಿದ್ದಾರೆ. ಆದರೆ ಇಲ್ಲೊಬ್ಬ ಅದೃಷ್ಟವಂತ ಪ್ರಯಾಣಿಕ ಇಸ್ರೋದ ಚಂದ್ರಯಾನ 3 ಉಡಾವಣೆಯನ್ನು ಚೆನ್ನೈ ಹಾಗೂ ಢಾಕಾ ನಡುವೆ ತೆರಳುತ್ತಿದ್ದ ಇಂಡಿಗೋ ವಿಮಾನದ ಕಿಟಕಿಯ ಬದಿಯ ಸೀಟಿನಲ್ಲಿ ಕುಳಿತು ಕಣ್ತುಂಬಿಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ 2:35ಕ್ಕೆ ಸರಿಯಾಗಿ ಇಸ್ರೋ ಹೆವಿ-ಲಿಫ್ಟ್ LVM3-M4 ರಾಕೆಟ್ ನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರದಿಂದ ಉಡಾವಣೆ ಮಾಡಿದೆ.
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ರಾಕೆಟ್ನ ವಿಡಿಯೋವನ್ನು ಶೇರ್ ಮಾಡಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಂದ್ರಯಾನ 3 ನೌಕೆಯು 40 ದಿನಗಳ ಪ್ರಯಾಣ ಪೂರ್ಣಗೊಳಿಸಿದ ಬಳಿಕ ಆಗಸ್ಟ್ 23ರಂದು ಚಂದ್ರನ ಅಂಗಳ ತಲುಪಲಿದೆ.
https://twitter.com/i/status/1680066898015424514