alex Certify ಬರ್ತಡೇ ಎಂಜಾಯ್ ಮಾಡಲು ಮನಾಲಿಗೆ ಹೋದ ಜೋಡಿ ಬದುಕಿ ಬಂದಿದ್ದೇ ಪವಾಡ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರ್ತಡೇ ಎಂಜಾಯ್ ಮಾಡಲು ಮನಾಲಿಗೆ ಹೋದ ಜೋಡಿ ಬದುಕಿ ಬಂದಿದ್ದೇ ಪವಾಡ….!

ಸೋನಿಯಾ ರೋಹ್ರಾ ಮತ್ತು ಲೋಕೇಶ್ ಪಂಜಾಬಿ ಇಬ್ಬರೂ ಮೂಲತಃ ಪುಣೆಯವರು. ಲೋಕೇಶ್ ಈ ಬಾರಿ ತಮ್ಮ ಪತ್ನಿ ಸೋನಿಯಾ ಅವರ 35ನೇ ಜನ್ಮದಿನ ಇನ್ನಷ್ಟು ವಿಶೇಷವನ್ನಾಗಿ ಮಾಡಲು ಮನಾಲಿಗೆ ಹೋಗುವುದಕ್ಕೆ ಪ್ಲಾನ್ ಮಾಡುತ್ತಾರೆ. ಪತ್ನಿ ಸೋನಿಯಾ ರೋಹ್ರಾ ಅವರಿಗೆ, ಈ ಪ್ಲಾನ್ ಸರ್ಪ್ರೈಸ್ ಆಗಿರುತ್ತೆ.

ಲೋಕೇಶ್ ಈ ಸರ್ಪ್ರೈಸ್ ಪ್ಲಾನ್ ಮಾಡುವಾಗ ಉತ್ತರ ಭಾರತದಲ್ಲಿ ಪ್ರವಾಹ ಇರಲಿ ಅಲ್ಲಿ ಮಳೆಯೂ ಬರುತ್ತಿರಲಿಲ್ಲ. ಇದೇ ಕಾರಣಕ್ಕೆ ಮನಾಲಿ ಮತ್ತು ಕಸೋ ಲ್​ನಲ್ಲಿ ಮೊದಲೇ ರೂಮ್​ನ್ನ ಬುಕ್ ಮಾಡಿರುತ್ತಾರೆ. ‘ಜುಲೈ4 ರಂದು ನನ್ನ ಪತ್ನಿಯ ಜನ್ಮದಿನವಿತ್ತು. ಇದೇ ಕಾರಣಕ್ಕೆ ನಾನು ಮೊದಲೇ ಎಲ್ಲ ಪ್ಲಾನ್​​ಗಳನ್ನ ಮಾಡಿಕೊಂಡಿದ್ದೆ. ನಾವು ಜೂನ್ 7ರಂದು ಮನಾಲಿಗೆ ಹೊರಟು, ಜೂನ್ 8ರ ಬೆಳಗಿನ ಜಾವ ಪಂಜಾಬ್​​ನ ಚಂಡಿಘಡ್ ತಲುಪಿದ್ದೇವು. ಅಲ್ಲಿಂದ ಕ್ಯಾಬ್ ಮಾಡಿಕೊಂಡು ಕಸೋಲ್​​ಗೆ ಹೋಗಿ ಅಲ್ಲಿಂದ ಮನಾಲಿಗೆ ಹೋಗುವ ಪ್ಲಾನ್ ಮಾಡಿದ್ದೇವು.’

‘ಅದೇ ದಿನ ಸಂಜೆ 6 ಗಂಟೆ. ನಾವಿನ್ನೂ ಕಸೋಲ್​ಗೆ ತಲುಪಿರಲಿಲ್ಲ. ಆಗಲೇ ಮಳೆ ಶುರುವಾಗಿತ್ತು. ಅಲ್ಲಿ ಮಳೆ ಕಾಮನ್. ಇನ್ನೇನು ಮಳೆ ನಿಂತು ಬಿಡುತ್ತೆ ಅಂತ ನಿರೀಕ್ಷೆ ಮಾಡಿದ್ದೇವು. ಆದರೆ ಮಳೆ ನಿಂತಿರಲಿಲ್ಲ. ಜೂನ್ 9 ಮಣಿಕರಣ್ ಸಾಹಿಬ್ ದಾರಿಮಧ್ಯದಲ್ಲಿ ಇರುವಾಗಲೇ ಭಾರೀ ಮಳೆ ಶುರುವಾಗಿತ್ತು. ಅದೇ ಸಮಯದಲ್ಲಿ ದಾರಿ ಮಧ್ಯದಲ್ಲಿ ಭಾರೀ ಗಾತ್ರದ ಮರವೊಂದು ಬಿದ್ದಿತ್ತು. ಆದ್ದರಿಂದ ಬೇರೆ ದಾರಿ ಇಲ್ಲದೇ, ಕುಲು ಕಡೆಗೆ ಪಯಣ ಬೆಳಸಿದೆವು. ಆಗ ಏನಿಲ್ಲ ಅಂದರೂ 2 ಗಂಟೆಗಳ ಕಾಲ ಅನುಭವಿಸಬಾರದ ಕಷ್ಟವನ್ನ ನಾವು ಅನುಭವಿಸಿದ್ದೇವು. ಆಗ ದಾರಿ ಮಧ್ಯದಲ್ಲಿಯೇ ಒಂದು ಕಡೆ ಭೂ ಕುಸಿತ ನಮ್ಮ ಕಣ್ಮುಂದೆಯೇ ನಡೆಯಿತು. ಬಂಡೆಗಳು ಮೇಲಿಂದ ರಾಶಿ ರಾಶಿ ಉರುಳಿ ಬೀಳೋದನ್ನನೋಡುವುದೇ ಭಯಾನಕವಾಗಿತ್ತು.’ ಆಗ ನಾವು ಬದುಕಿದ್ದೇ ಪವಾಡ ಎಂದು ಸೋನಿಯಾ ತಮ್ಮ ಅನುಭವನ್ನ ವಿವರಿಸುತ್ತಾರೆ.

‘ಅಲ್ಲಿದ್ದ ಫೈವ್​ಸ್ಟಾರ್​ ಹೊಟೇಲ್​​ಗಳಲ್ಲಿ ನಾವು ರೂಮ್​​ಗಳನ್ನ ಮುಂಚಿತವಾಗಿ ಬುಕ್ ಮಾಡಿದ್ದೇವು. ಆದರೆ ನಾವು ದಾರಿ ಮಧ್ಯದಲ್ಲಿ ಸಿಕ್ಕಾಕಿಕೊಂಡಿದ್ದರಿಂದ ನಾವು ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಅದನ್ನು ಕ್ಯಾನ್ಸಲ್ ಮಾಡಿದೆವು. ಹೆಚ್ಚು ಕಡಿಮೆ ಒಂದು ವಾರಗಳ ಕಾಲ ಅನುಭವಿಸಬಾರದ ಯಾತನೆಯನ್ನ ಅಲ್ಲಿ ಅನುಭವಿಸಿದೆವು. ಅಂತೂ ಇಂತೂ ಜೂನ್ 11ರಂದು ಹಂತ ಹಂತವಾಗಿ ಎಲ್ಲವೂ ಯಥಾಸ್ಥಿತಿ ಬಂದೇ ಬಿಡ್ತು ಅನ್ನುವಷ್ಟರಲ್ಲೇ ಜೂನ್ 12ರಂದು ಮತ್ತೆ ಮಳೆ ಸುರಿಯಲಾರಂಭಿಸಿತ್ತು. ಆದರೆ ಆ ಸಮಯದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿರಲಿಲ್ಲ. ನಾವು ಆದಷ್ಟು ಜಾಗರೂಕರಾಗಿ ಅಲ್ಲೇ ಇದ್ದ ಹೊಟೇಲ್ ಒಂದರಲ್ಲಿ ಕೊಂಚ ವಿಶ್ರಾಂತಿ ಪಡೆದು ನಮ್ಮ ಪಯಣವನ್ನ ಕಿರಿದಾದ ರಸ್ತೆಗಳ ಮೂಲಕ ಮತ್ತೆ ಮುಂದುವರೆಸಿದೆವು. ತದ ನಂತರ ಮಂಡಿಗೆ ಬಂದು ಆ ನಂತರ ಮತ್ತೆ ಚಂಡಿಘಡ್​ಗೆ ಸುರುಕ್ಷಿತವಾಗಿ ಬಂದೆವು. ಅಲ್ಲಿಂದ ಪ್ಲೇನ್ ಮೂಲಕ ಪುಣೆಗೆ ಬಂದು ಮನೆ ಸೇರಿದ್ದಾರೆ.

ಈ ಅನುಭವದ ಜೊತೆ ಜೊತೆಗೆ ಸೋನಿಯಾ ಕೊನೆಯದಾಗಿ ಒಂದೇ ಮಾತು ಹೇಳಿದ್ದರು. ‘ನಮ್ಮ ಪ್ರವಾಸ ಅಂದುಕೊಂಡಿದ್ದ ಹಾಗೆ ಆಗಿರಲಿಲ್ಲ. ನಾವು ಸುಂದರ ನೆನಪುಗಳೊಂದಿಗೆ ಮರಳಿಲ್ಲ ನಿಜ. ಆದರೆ ಅಲ್ಲಿನ ಜನರ ಸಹಾಯ ನಮ್ಮ ಹೃದಯದಲ್ಲಿ ಅಚ್ಚಳಿಯದಂತೆ ಮಾಡಿದೆ. ಅಲ್ಲಿ ನಮ್ಮಂತೆ ಅನೇಕ ಜನರು ಪ್ರಾಣಭಯದಿಂದ ಒದ್ದಾಡಿದ್ದರು. ಆದರೂ ಒಬ್ಬರಿಗೊಬ್ಬರು ಸಹಾಯ ಮಾಡಿದ್ದರು.’

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...