‘ಕರಾಚಿಯಿಂದ ಜನರು ತಮ್ಮ ಪ್ರೀತಿಪಾತ್ರರ ಜೊತೆ ಈದ್ ಹಬ್ಬವನ್ನು ಆಚರಿಸಲು ಒಳಗಿನ ಲೋಕಕ್ಕೆ ಹೋಗುತ್ತಿದ್ದಾರೆ. ಕ್ಯಾಮರಾಮ್ಯಾನ್ ಯುಸೂಫ್ ಜೊತೆ ಚಾಂದ್ ನವಾಬ್ ಇಂಡಸ್ ನ್ಯೂಸ್ ಕರಾಚಿ’
ಅನೇಕ ವರ್ಷಗಳ ಹಿಂದೆ, ಪಾಕಿಸ್ತಾನಿ ಪತ್ರಕರ್ತ ಚಾಂದ್ ನವಾಬ್ ತಾವು ಮಾಡುವ ಈದ್ ಹಬ್ಬದ ಸಂಬಂಧ ಪುಟ್ಟ ಸ್ಟೋರಿಯೊಂದು ತಮ್ಮನ್ನು ಈ ಮಟ್ಟಕ್ಕೆ ಜನಪ್ರಿಯಗೊಳಿಸಬಹುದು ಎಂದು ಕನಸಲ್ಲೂ ಊಹಿಸಿರಲು ಸಾಧ್ಯವೇ ಇಲ್ಲ.
ಜನರ ಜೊತೆ ಮಾತನಾಡುವ ಅವರು ಹೇಗೆ ಗಲಿಬಿಲಿಗೆ ಒಳಗಾದ್ರು ಅನ್ನೋದನ್ನ ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಯ್ತು ಅಂದರೆ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಚಾಂದ್ ನವಾಬರ ಪಾತ್ರವನ್ನು ನಿರ್ವಹಿಸಿದ್ದರು.
ಆದರೆ ಇದೀಗ ಈ ವಿಡಿಯೋ ನಿಮ್ಮದು ಕೂಡ ಆಗಬಹುದು…! ಯೆಸ್, ಏಕೆಂದರೆ ಎನ್ಎಫ್ಟಿ ಈ ವಿಡಿಯೋವನ್ನು ಹರಾಜಿಗೆ ಇಟ್ಟಿದೆ. Foundation. App ವೆಬ್ಸೈಟ್ನಲ್ಲಿ ನಿಮಗೆ ಈ ವಿಡಿಯೋಗೆ ಹರಾಜಿಗಿದೆ. ಈ ಹರಾಜಿನಲ್ಲಿ ಭಾಗಿಯಾಗಲು ನೀವು ಹಾಕಬಹುದಾದ ಕನಿಷ್ಟ ಹರಾಜು ಮೊತ್ತ 46 ಲಕ್ಷ ರೂಪಾಯಿ..!
ನಾನು ಚಾಂದ್ ನವಾಬ್, ಪತ್ರಕರ್ತ, ವೃತ್ತಿಯಲ್ಲಿ ವರದಿಗಾರ. 2008ರಲ್ಲಿ ರೈಲ್ವೆ ನಿಲ್ದಾಣವೊಂದರಲ್ಲಿ ಈದ್ ಹಬ್ಬದ ಸಂಬಂಧ ಮಾಡುತ್ತಿದ್ದ ಸ್ಟೋರಿಯ ವಿಡಿಯೋವೊಂದು ವೈರಲ್ ಆಗಿತ್ತು.
ನಾನು ವರದಿ ನೀಡುತ್ತಿದ್ದ ವೇಳೆ ಜನರು ನನಗೆ ಕಿರಿಕಿರಿ ಮಾಡಿದರು. ಇದರಿಂದ ನನಗೆ ಮಾತು ತೊದಲಾಯಿತು. ಇದೇ ಕಾರಣಕ್ಕೆ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. 2016ರಲ್ಲಿ ನನ್ನ ವಿಡಿಯೋದಿಂದ ಪ್ರೇರಣೆ ಪಡೆದ ಫಿಲಂ ಮೇಕರ್ ಕಬೀರ್ ಖಾನ್ ಪ್ರಸಿದ್ಧ ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ನನ್ನ ಹೆಸರಿನ ಪಾತ್ರವನ್ನು ನವಾಜುದ್ದೀನ್ ಸಿದ್ದಕಿ ಅವರಿಂದ ನಿರ್ವಹಿಸುವ ಮೂಲಕ ಮತ್ತೊಮ್ಮೆ ನನ್ನನ್ನು ಫೇಮಸ್ ಮಾಡಲಾಯ್ತು. ರಾತ್ರೋರಾತ್ರಿ ನಾನು ಪಾಕಿಸ್ತಾನ ಹಾಗೂ ಭಾರತದಲ್ಲಿ ಸುದ್ದಿಯಲ್ಲಿದ್ದೆ ಎಂದು ವಿವರಣೆ ನೀಡಲಾಗಿದೆ.
ಈ ವಿಡಿಯೋ ಹರಾಜಿಗಿದೆ ಎಂಬ ವಿಚಾರ ಬಯಲಾಗುತ್ತಿದ್ದಂತೆಯೇ ಅನೇಕರು ಇದನ್ನು ಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.