alex Certify BIG NEWS: ಉದ್ಯಮಿಗೆ ವಂಚನೆ ಕೇಸ್: ಚೈತ್ರಾ ಹಾಗೂ ಗ್ಯಾಂಗ್ ಗೆ ಕೈದಿ ನಂಬರ್ ನೀಡಿದ ಜೈಲಾಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉದ್ಯಮಿಗೆ ವಂಚನೆ ಕೇಸ್: ಚೈತ್ರಾ ಹಾಗೂ ಗ್ಯಾಂಗ್ ಗೆ ಕೈದಿ ನಂಬರ್ ನೀಡಿದ ಜೈಲಾಧಿಕಾರಿ

ಬೆಂಗಳೂರು: ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಚೈತ್ರಾ ಹಾಗೂ ಗ್ಯಾಂಗ್ ಗೆ ಜೈಲಾಧಿಕಾರಿಗಳು ಕೈದಿ ನಂಬರ್ ನೀಡಿದ್ದಾರೆ.

ವಂಚನೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಚೈತ್ರಾ ಹಾಗೂ ಗ್ಯಾಂಗ್ ನ ಸಿಸಿಬಿ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ನಿನ್ನೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಕೋರ್ಟ್, ಚೈತ್ರಾ ಸೇರಿದಂತೆ 7 ಆರೋಪಿಗಳನ್ನು 14 ದಿನಗಳ ಕಾಲ ಅಕ್ಟೋಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ಚೈತ್ರಾ ಹಾಗೂ ಗ್ಯಾಂಗ್ ನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಜೈಲಾಧಿಕಾರಿಗಳು ಆರೋಪಿಗಳಿಗೆ ಕೈದಿ ನಂಬರ್ ನೀಡಿದ್ದಾರೆ. ಎ 1 ಆರೋಪಿ ಚೈತ್ರಾಗೆ 9737 ನಂಬರ್ ನೀಡಲಾಗಿದ್ದು, ಮೋಹನ್ ಕುಲಾರ್ ಗೆ ಕೈದಿ ನಂಬರ್ 9738, ರಮೇಶ್ ಗೆ 9739, ಚೆನ್ನಾನಾಯ್ಕ್ ಗೆ 9740, ಧನರಾಜ್ ಗೆ 9741 ಕೈದಿ ನಂಬರ್ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...