alex Certify ದಂಗಾಗಿಸುವಂತಿದೆ ಆಪಲ್ ಸಿಇಓ ಟಿಮ್‌ ಕುಕ್‌ ಪಡೆಯುವ ವೇತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಆಪಲ್ ಸಿಇಓ ಟಿಮ್‌ ಕುಕ್‌ ಪಡೆಯುವ ವೇತನ

ತಂತ್ರಜ್ಞಾನ ಲೋಕದ ಸೂಪರ್‌ಪವರ್‌ ಆಪಲ್‌ನ ಬಾಸ್ ಟಿಮ್ ಕುಕ್‌‌ ಪಡೆಯುವ ವೇತನವು ಕಂಪನಿಯ ಸರಾಸರಿ ಉದ್ಯೋಗಿಯ 1,447 ಪಟ್ಟಿನಷ್ಟು ಇದೆ ಎಂದು ತಿಳಿದು ಬಂದಿದೆ. ಶೇರು ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ಕಂಡು ಬರುತ್ತಿರುವ ನಡುವೆ ಟಿಮ್ ಕುಕ್‌ರ ಸಂಪಾದನೆ $100 ದಶಲಕ್ಷದಷ್ಟು ಮುಟ್ಟಿದೆ.

2021ರಲ್ಲಿ ಆಪಲ್‌ನ ಉದ್ಯೋಗಿಗಳ ಸರಾಸರಿ ವೇತನ $68,254 ಇತ್ತು ಎಂದು ಕಂಪನಿ ತಿಳಿಸಿದ್ದು, ಹೈರಿಂಗ್ ಮತ್ತು ವೇತನದ ನಡುವೆ ತುಲನೆಗಾಗಿ ಹೊಸ ಸರಾಸರಿಯನ್ನು ಆಯ್ಕೆ ಮಾಡಕೊಂಡಿರುವುದಾಗಿ ತಿಳಿಸಿದೆ. 2020ರಲ್ಲಿ ಕಂಪನಿಯ ಸರಾಸರಿ ನೌಕರನ ವೇತನ $57,783 ಇದ್ದು, ಇದು ಟಿಮ್ ಕುಕ್‌ ಪಡೆಯುವ 1/256ರಷ್ಟಿತ್ತು.

ದಂಗಾಗಿಸುತ್ತೆ ಆಪಲ್‌ CEO ಸಹಿ ಇದ್ದ ಮ್ಯಾಗಜೀನ್‌ ಬೆಲೆ

ಕಳೆದ ಎರಡು ವರ್ಷಗಳಲ್ಲಿ ತನ್ನ ಗ್ರಾಹಕರು ಮನೆಗಳಿಂದ ಕೆಲಸ ಮಾಡುತ್ತಿರುವ ಕಾರಣ ಉತ್ಪನ್ನಗಳಿಗೆ ತೀವ್ರಗತಿಯಲ್ಲಿ ಏರುತ್ತಿರುವ ಬೇಡಿಕೆಯಿಂದಾಗಿ ಐಫೋನ್ ತಯಾರಕ ಭಾರೀ ಪ್ರಯೋಜನ ಪಡೆದಿದೆ. 2021ರಲ್ಲಿ ಆಪಲ್‌ನ ಆದಾಯ 30%ನಷ್ಟು ಏರಿಕೆ ಕಂಡಿದ್ದು, $365.82 ಶತಕೋಟಿ ಆದಾಯದ ಮೂಲಕ ಕಂಪನಿಯ ಶೇರುಗಳು ತೀವ್ರವಾಗಿ ಏರಿದ್ದು ಮಾರುಕಟ್ಟೆ ಮೌಲ್ಯವು $3 ಟ್ರಿಲಿಯನ್ ಮುಟ್ಟಿತ್ತು.

$3 ದಶಲಕ್ಷದಷ್ಟು ವೇತನ ಪಡೆಯುವ ಕುಕ್, ಶೇರು ಮಾರುಕಟ್ಟೆಯಿಂದ $82.3 ದಶಲಕ್ಷ ಪಡೆದಿದ್ದು, ಆಪಲ್‌ನ ಟಾರ್ಗೆಟ್ ಮುಟ್ಟಿದ್ದಕ್ಕೆ $12 ದಶಲಕ್ಷದ ಪ್ರೋತ್ಸಾಹ ಧನ ಮತ್ತು $1.4 ದಶಲಕ್ಷ ವಿಮಾನ ಪ್ರಯಾಣಕ್ಕೆ, ವಿಮೆ ಪ್ರೀಮಿಯಂಗಳು ಮತ್ತು ಇತರ ವೆಚ್ಚಗಳಿಗಾಗಿ ಸ್ವೀಕರಿಸಿದ್ದಾರೆ.

2020ರಲ್ಲಿ $14.8 ದಶಲಕ್ಷ ಸಂಪಾದಿಸಿದ್ದ ಕುಕ್‌, ಈ 2021ರಲ್ಲಿ $98.7 ದಶಲಕ್ಷ ಸಂಪಾದನೆ ಮಾಡಿದ್ದಾರೆ.

2011ರಲ್ಲಿ ಕಂಪನಿಯ ಸಹ-ಸ್ಥಾಪಕ ಸ್ಟೀವ್‌ ಜಾಬ್ಸ್‌ ಸಿಇಓ ಹುದ್ದೆಯಿಂದ ಕೆಳಗಿಳಿದು ಕುಕ್‌ ಈ ಸ್ಥಾನಕ್ಕೆ ಆಗಮಿಸಿದ್ದಾರೆ. ಕುಕ್ ಅಧಿಕಾರ ತೆಗೆದುಕೊಂಡಾಗಿನಿಂದ ಕಂಪನಿಯ ಶೇರು ಮೌಲ್ಯ 1,000%ಗಿಂತ ಹೆಚ್ಚಿನ ವರ್ಧನೆಯಾಗಿದೆ.

ಸುದೀರ್ಘಾವಧಿ ಈಕ್ವಿಟಿ ಪ್ಲಾನ್‌ನಿಂದಾಗಿ ಸೆಪ್ಟೆಂಬರ್‌ನಲ್ಲಿ ಕುಕ್‌ 3,33,987 ನಿರ್ಬಂಧಿತ ಸ್ಟಾಕ್‌ ಘಟಕಗಳನ್ನು ಪಡೆದುಕೊಂಡಿದ್ದಾರೆ. 2023ರಲ್ಲಿ ಕುಕ್‌ ಹೆಚ್ಚುವರಿ ಘಟಕಗಳನ್ನು ಪಡೆಯಲು ಅರ್ಹರಾಗಲಿದ್ದಾರೆ.

2020ರಲ್ಲಿ ಅಮೆರಿಕ ಕಂಪನಿಗಳಲ್ಲಿರುವ ಸಿಇಓಗಳಿಗೆ ಅಲ್ಲಿನ ಸರಾಸರಿ ನೌಕರರ 351 ಪಟ್ಟು ವೇತನ ಸಿಕ್ಕಿದೆ ಎಂದು ಎಕನಾಮಿಕ್ ಪಾಲಿಸಿ ಸಂಸ್ಥೆ ತಿಳಿಸಿದೆ. 1978-2020ರ ನಡುವೆ ಕಂಪನಿಗಳ ಸರಾಸರಿ ನೌಕರರ ವೇತನಗಳು ಶೇರು ಮಾರುಕಟ್ಟೆಗಿಂತ 18% ವೇಗವಾಗಿ ಹೆಚ್ಚಳವಾದರೆ ಸಿಇಓಗಳ ವೇತನಗಳು 60%ನಷ್ಟು ಹೆಚ್ಚಳವಾಗುತ್ತಾ ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...