alex Certify BIG NEWS: ಉಕ್ಕಿನ ಮೇಲಿನ ರಫ್ತು ಸುಂಕ ಹಿಂಪಡೆದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಕ್ಕಿನ ಮೇಲಿನ ರಫ್ತು ಸುಂಕ ಹಿಂಪಡೆದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಉಕ್ಕಿನ ಮೇಲಿನ ರಫ್ತು ಸುಂಕವನ್ನು ಹಿಂಪಡೆದಿದೆ. ಕೇಂದ್ರ 22ನೇ ಮೇ 2022 ರ ಮೊದಲು ಚಾಲ್ತಿಯಲ್ಲಿದ್ದ ಯಥಾಸ್ಥಿತಿಯನ್ನು ಮರುಸ್ಥಾಪಿಸಿದೆ.

ಕಬ್ಬಿಣದ ಅದಿರು, ಉಕ್ಕಿನ ಉತ್ಪನ್ನಗಳ ಮೇಲಿನ ರಫ್ತು ಸುಂಕವನ್ನು ಹಿಂಪಡೆದಿದೆ. ಆಂಥ್ರಾಸೈಟ್ / ಪಿಸಿಐ ಕಲ್ಲಿದ್ದಲು, ಕೋಕಿಂಗ್ ಕಲ್ಲಿದ್ದಲು, ಕೋಕ್ ಮತ್ತು ಸೆಮಿ ಕೋಕ್ ಮತ್ತು ಫೆರೋನಿಕಲ್ ಮೇಲಿನ ಆಮದು ಸುಂಕದ ರಿಯಾಯಿತಿಗಳನ್ನು ಸಹ ಹಿಂಪಡೆಯಲಾಗಿದೆ.

ಮೇ, 2022 ಉಕ್ಕಿನ ಬೆಲೆಗಳಲ್ಲಿ ಏರಿಕೆಯ ಹಿನ್ನೆಲೆಯಲ್ಲಿ ಸರ್ಕಾರವು ಈ ವರ್ಷದ ಆರಂಭದಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿತು. 22ನೇ ಮೇ, 2022 ರಿಂದ ಜಾರಿಗೆ ಬರುವಂತೆ 58% ಕ್ಕಿಂತ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿರುವ ಕಬ್ಬಿಣದ ಅದಿರಿನ ಮೇಲಿನ ರಫ್ತು ಸುಂಕವನ್ನು 30% ರಿಂದ 50% ಮೌಲ್ಯಕ್ಕೆ ಹೆಚ್ಚಿಸಲಾಗಿತ್ತು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...