ವಿಶ್ವದಾದ್ಯಂತ ಇನ್ನು ಕೊರೊನಾ ಮುಗಿದಿಲ್ಲ. ನಿಧಾನವಾಗಿ ಕೊರೊನಾ ಸೋಂಕು ಕಡಿಮೆಯಾಗ್ತಿದೆ. ಕೊರೊನಾ ಲಸಿಕೆ ಹಾಕ್ತಿದ್ದಂತೆ ಜನರು ಮನೆಯಿಂದ ಹೊರ ಬರಲು ಶುರು ಮಾಡಿದ್ದಾರೆ. ಕಚೇರಿ, ಶಾಲೆ ಸೇರಿದಂತೆ ಎಲ್ಲವೂ ನಿಧಾನವಾಗಿ ತೆರೆಯಲಾರಂಭಿಸಿದೆ. ಹಬ್ಬದ ಋತುವಿನಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಿದೆ. ಹಾಗಾಗಿ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಮಾರ್ಗಸೂಚಿ ಪಾಲಿಸುವಂತೆ ಸೂಚನೆ ನೀಡಿದೆ. ಆನ್ಲೈನ್ ಶಾಪಿಂಗ್ ಗೆ ಉತ್ತೇಜನ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಅನಗತ್ಯ ಮಾರುಕಟ್ಟೆ ಓಡಾಟವನ್ನು ತಡೆಯಬೇಕು. ಆನ್ಲೈನ್ ಮಾರಾಟಕ್ಕೆ ಒತ್ತು ನೀಡಬೇಕೆಂದು ಸೂಚಿಸಲಾಗಿದೆ.
SHOCKING: ಕೊರೊನಾದಿಂದ ಕಡಿಮೆಯಾಯ್ತು ಭಾರತೀಯರ ಜೀವಿತಾವಧಿ
ಜನರು ಅನಗತ್ಯ ಪ್ರಯಾಣವನ್ನು ತಡೆಯಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಸರ್ಕಾರಿ ಕಾರ್ಯಕ್ರಮಗಳನ್ನು ಆನ್‌ಲೈನ್‌ನಲ್ಲಿ ನಡೆಸಬೇಕು. ಕೋವಿಡ್ ಪ್ರಕರಣಗಳ ಗ್ರಾಫ್ ಮೇಲೆ ಜಿಲ್ಲಾಧಿಕಾರಿಗಳು ತೀವ್ರ ನಿಗಾ ಇಡಬೇಕು. ಹಬ್ಬಗಳ ಆಚರಣೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಲ್‌ಗಳು, ಸ್ಥಳೀಯ ಮಾರುಕಟ್ಟೆಗಳು ಮತ್ತು ಪೂಜಾ ಸ್ಥಳಗಳಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕೆಂದು ಹೇಳಿದೆ.
ಕೆಲವು ದೇಶಗಳಲ್ಲಿ ಕೊರೊನಾ ಸೋಂಕು ಮತ್ತೆ ಹರಡುತ್ತಿದೆ. ರಷ್ಯಾ, ಬ್ರಿಟನ್ ಮತ್ತು ಚೀನಾದಂತಹ ದೇಶಗಳಲ್ಲಿ ಪರಿಸ್ಥಿತಿ ಮತ್ತೆ ಹದಗೆಡಲು ಪ್ರಾರಂಭಿಸಿದೆ. ಅನೇಕ ಕಡೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಮತ್ತು ಲಾಕ್‌ಡೌನ್ ವಿಧಿಸಲಾಗುತ್ತಿದೆ. ಹಾಗಾಗಿ ಹಬ್ಬದ ಸಂದರ್ಭದಲ್ಲಿ ಹೆಚ್ಚು ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.