alex Certify BIG NEWS: ಗಡಿ ಭದ್ರತಾ ಪಡೆ ಹುದ್ದೆಗೆ ಅರ್ಜಿ ಆಹ್ವಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಡಿ ಭದ್ರತಾ ಪಡೆ ಹುದ್ದೆಗೆ ಅರ್ಜಿ ಆಹ್ವಾನ….!

ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬೇಕು ಎಂದು ಬಯಸುವವರಿಗೊಂದು ಸುವರ್ಣಾವಕಾಶ ಇದೆ. ಗಡಿ ಭದ್ರತಾ ಪಡೆ ನೇಮಕಾತಿ ಅಧಿಸೂಚನೆಯಂತೆ ಇದೀಗ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಒಟ್ಟು 254 ಹೆಡ್​ ಕಾನ್ಸ್​ಟೇಬಲ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಇದೀಗ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಆರಂಭ ದಿನಾಂಕ ನವೆಂಬರ್ 4 ರಿಂದ ಆರಂಭವಾಗಿದ್ದು, ಜನವರಿ 3, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯ, ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಡಿಪ್ಲೋಮಾ, ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ ಎಷ್ಟಿರಬೇಕು..?

ಅಭ್ಯರ್ಥಿಗಳ ವಯಸ್ಸು ಜನವರಿ 3, 2023ಕ್ಕೆ ಗರಿಷ್ಠ 52 ವರ್ಷ ಮೀರಿರಬಾರದು.

ವೇತನ

ಹೆಡ್​ ಕಾನ್ಸ್​​ಟೇಬಲ್ ಹುದ್ದೆಗೆ ಮಾಸಿಕ ವೇತನ 25,500 ರಿಂದ 81,100 ರೂಪಾಯಿ ಇರಲಿದೆ.

ಲಿಖಿತ ಪರೀಕ್ಷೆ ನಂತರ ಸಂದರ್ಶನ ಇರಲಿದ್ದು ಇದರಲ್ಲಿ ಆಯ್ಕೆ ಆದ ಅಭ್ಯರ್ಥಿಗಳು ರಕ್ಷಣಾ ಸೇವೆಗೆ ಆಯ್ಕೆ ಆಗಲಿದ್ದಾರೆ.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕಿದೆ.

ಡೆಪ್ಯುಟಿ ಇನ್ಸ್​​ಪೆಕ್ಟರ್ ಜನರಲ್ (Tpt),
ಡೈರೆಕ್ಟೋರೇಟ್ ಜನರಲ್
BSF, ಬ್ಲಾಕ್ ನಂ.10
ಸಿಜಿಒ ಕಾಂಪ್ಲೆಕ್ಸ್​​
ಲೋಧಿ ರಸ್ತೆ
ನವಹದೆಲಿ- 110003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...