alex Certify ಸ್ವಂತ ಸೂರು ಹೊಂದುವ ಕನಸು ಕಾಣುತ್ತಿದ್ದವರಿಗೆ ಬಿಗ್‌ ಶಾಕ್…!‌ ಮುಗಿಲು ಮುಟ್ಟಿದ ಸಿಮೆಂಟ್‌ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಸೂರು ಹೊಂದುವ ಕನಸು ಕಾಣುತ್ತಿದ್ದವರಿಗೆ ಬಿಗ್‌ ಶಾಕ್…!‌ ಮುಗಿಲು ಮುಟ್ಟಿದ ಸಿಮೆಂಟ್‌ ಬೆಲೆ

ಭಾರತದಲ್ಲಿ ನಿರ್ಮಾಣ ಕಾಮಗಾರಿಗಳು ಎಷ್ಟು ಭರದಿಂದ ಸಾಗುತ್ತಿವೆ ಎಂದರೆ, ಇನ್ನು 20 ವರ್ಷಗಳಲ್ಲಿ ಇಡೀ ದೇಶವೇ ಹೊಸ ಕಟ್ಟಡಗಳ ಮೂಲಕ ರಾರಾಜಿಸಲಿದೆ. ಸದ್ಯ ದುಬೈನಲ್ಲಿ ಗಗನಚುಂಬಿ ಕಟ್ಟಡಗಳ ದೊಡ್ಡ ಸಂತೆಯೇ ಸೃಷ್ಟಿ ಆಗಿರುವಂತೆ ದೇಶದ ಮಹಾನಗರಗಳಲ್ಲಿ ಕಟ್ಟಡಗಳು ತಲೆ ಎತ್ತಲಿವೆ.

ಪುಟ್ಟ ಮಗನಿಗೆ ಬೈಗುಳ ಹೇಳಿಕೊಟ್ಟು ಅಭಿಮಾನಿಗಳನ್ನು ಕಳೆದುಕೊಂಡ ಮಹಿಳೆ

ಜತೆಗೆ ಸ್ವಂತ ಮನೆ ಹೊಂದುವ ಹೆಬ್ಬಯಕೆಯಿಂದಾಗಿ ಜನರು ನಿರ್ಮಾಣದತ್ತ ಅತ್ಯಧಿಕ ಒಲವು ತೋರುತ್ತಿದ್ದಾರೆ. ರಿಯಲ್‌ ಎಸ್ಟೇಟ್‌ ಕ್ಷೇತ್ರ ಪೂರ್ಣ ಚೇತರಿಕೆಯೊಂದಿಗೆ ಶರವೇಗದಲ್ಲಿ ಅಭಿವೃದ್ಧಿ ಕಾಣುತ್ತಿದೆ.

ಪೂರಕವಾಗಿ ಕಟ್ಟಡ ನಿರ್ಮಾಣದಲ್ಲಿ ಬಹಳ ಮುಖ್ಯ ವಸ್ತುವಾದ ಸಿಮೆಂಟ್‌ಗೆ ಬೇಡಿಕೆ ಮಿತಿಮೀರುತ್ತಿದೆ. ಆದರೆ, ಸಿಮೆಂಟ್‌ ತಯಾರಿಕೆ ಕಚ್ಚಾ ವಸ್ತುಗಳು, ಕಾರ್ಖಾನೆಗಳಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ, ಸಾಗಾಟ ವೆಚ್ಚಗಳು ಬಹಳ ಹೆಚ್ಚಳವಾಗುತ್ತಲೇ ಇವೆ. ಇದರಿಂದ ಬೇಸತ್ತ ಸಿಮೆಂಟ್‌ ತಯಾರಿಕಾ ಕಂಪನಿಗಳು ತಮ್ಮ ಮೇಲಿನ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸಲು ಮುಂದಾಗಿವೆ.

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಬಿಗ್ ಶಾಕ್: 3 ತಿಂಗಳಲ್ಲಿ 90 ರೂ. ಏರಿಕೆಯಾದ LPG ಸಿಲಿಂಡರ್ ದರ; ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೆ

ಸಿಮೆಂಟ್‌ ಚೀಲದ ಬೆಲೆಯು ಭಾರಿ ಏರಿಕೆ ಕಂಡಿದೆ. ಮುಂಬೈ, ಗುಜರಾತಿನಲ್ಲಿ ಪ್ರತಿ ಸಿಮೆಂಟ್‌ ಚೀಲದ ಬೆಲೆಯು 40 ರೂ. ಏರಿಕೆ ಆಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕನಿಷ್ಠ 20 ರೂ. ಹೆಚ್ಚಳ ಕಂಡಿದೆ.

ದೇಶದಲ್ಲಿ 50 ಕೆ.ಜಿ ತೂಕದ ಸಿಮೆಂಟ್‌ ಚೀಲವು ಸರಾಸರಿಯಾಗಿ 375 ರೂ.ಗಳಿಗೆ ಮಾರಾಟವಾಗುತ್ತಿದೆ. ಅಕ್ಟೋಬರ್‌ನಲ್ಲಿ ಸಿಮೆಂಟ್‌ ಬೆಲೆಯು ಏರಿಕೆ ದಾಖಲಿಸಿದ್ದು, ಕಟ್ಟಡ ನಿರ್ಮಾಣಗಾರರಿಗೆ ಬಿಸಿ ತಟ್ಟುತ್ತಿದೆ.

ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥ

ಸಾಮಾನ್ಯವಾಗಿ ಜುಲೈನಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲದ ಪರಿಣಾಮ ಕಟ್ಟಡ ನಿರ್ಮಾಣ ಕಾಮಗಾರಿ ಕಡಿಮೆ ಆಗುತ್ತದೆ. ಈ ವೇಳೆ ಸಿಮೆಂಟ್‌ ಬೇಡಿಕೆ ತಗ್ಗುವ ಮೂಲಕ ಬೆಲೆಯೂ 2-3% ಇಳಿಕೆ ಕಾಣುತ್ತದೆ. ಈ ಬಾರಿ ಕೊರೊನಾ ದಾಳಿ, ಲಾಕ್‌ಡೌನ್‌ ಸಂಕಷ್ಟದಿಂದ ತತ್ತರಿಸಿರುವ ಕಟ್ಟಡ ನಿರ್ಮಾಣ ಕ್ಷೇತ್ರವು ಪುಟಿದೇಳುವ ಭರದಲ್ಲಿ ಸಿಮೆಂಟ್‌, ಕಬ್ಬಿಣ, ಇತರ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಯನ್ನು ಹೆಚ್ಚಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿದೆ. ಡಿಸೆಂಬರ್‌ ವೇಳೆಗೆ ಸಿಮೆಂಟ್‌ ಡೀಲರ್‌ಗಳ ಒತ್ತಡದಿಂದಾಗಿ ಬೆಲೆಯು 10-15% ಹೆಚ್ಚುವರಿ ಏರಿಕೆ ಕಾಣಲಿದೆ ಎಂದು ಕಂಪನಿಗಳು ಅಂದಾಜಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...