ಸಾಮಾನ್ಯವಾಗಿ ಜುಲೈನಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲದ ಪರಿಣಾಮ ಕಟ್ಟಡ ನಿರ್ಮಾಣ ಕಾಮಗಾರಿ ಕಡಿಮೆ ಆಗುತ್ತದೆ. ಈ ವೇಳೆ ಸಿಮೆಂಟ್ ಬೇಡಿಕೆ ತಗ್ಗುವ ಮೂಲಕ ಬೆಲೆಯೂ 2-3% ಇಳಿಕೆ ಕಾಣುತ್ತದೆ. ಈ ಬಾರಿ ಕೊರೊನಾ ದಾಳಿ, ಲಾಕ್‌ಡೌನ್ ಸಂಕಷ್ಟದಿಂದ ತತ್ತರಿಸಿರುವ ಕಟ್ಟಡ ನಿರ್ಮಾಣ ಕ್ಷೇತ್ರವು ಪುಟಿದೇಳುವ ಭರದಲ್ಲಿ ಸಿಮೆಂಟ್, ಕಬ್ಬಿಣ, ಇತರ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಯನ್ನು ಹೆಚ್ಚಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿದೆ. ಡಿಸೆಂಬರ್ ವೇಳೆಗೆ ಸಿಮೆಂಟ್ ಡೀಲರ್‌ಗಳ ಒತ್ತಡದಿಂದಾಗಿ ಬೆಲೆಯು 10-15% ಹೆಚ್ಚುವರಿ ಏರಿಕೆ ಕಾಣಲಿದೆ ಎಂದು ಕಂಪನಿಗಳು ಅಂದಾಜಿಸಿವೆ.