ಕೊಚ್ಚಿ: ರಾಷ್ಟ್ರ ವಿರೋಧಿ ಚಟುವಟಿಕೆ ನಡೆದರೂ ಮುಸ್ಲಿಂ ಧರ್ಮದ ಹಿರಿಯರು ಅದನ್ನು ವಿರೋಧಿಸುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿಯೇ ಈ ಧರ್ಮದ ಮೇಲೆ ನನಗೆ ನಂಬಿಕೆ ಹೋಗಿದೆ ಎಂದು ನಿರ್ದೇಶಕ ಅಕ್ಬರ್ ಅಲಿ ಹಾಗೂ ಅವರ ಪತ್ನಿ ಮುಸ್ಲಿಂ ಧರ್ಮದಿಂದ ಹಿಂದು ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ.
ನಿರ್ದೇಶಕ ಅಲಿ ಅಕ್ಬರ್ ಮತಾಂತರಗೊಳ್ಳಲು, ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಜನ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಯೇ ಕಾರಣ ಎಂದು ಹೇಳಿದ್ದಾರೆ.
ಈ ಘಟನೆ ನಡೆದ ಸಂದರ್ಭದಲ್ಲಿ ಹಲವಾರು ವಿಕೃತ ಮನಸ್ಥಿತಿಯವರು ಸಂಭ್ರಮಿಸಿದ್ದೇ ಅವರ ಮನಸ್ಸಿಗೆ ಘಾಸಿಯಾಗಲು ಕಾರಣವಾಗಿದೆ. ಅಲ್ಲದೇ, ರಾವತ್ ಸಾವಿನ ಮಧ್ಯೆಯೂ ಸಂಭ್ರಮ ಪಡುವುದರೊಂದಿಗೆ ರಾಷ್ಟ್ರ ವಿರೋಧಿ ಚಟುವಟಿಕೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೀಗಾಗಿಯೇ ಅಕ್ಬರ್ ಅಲಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ಭೀಕರ ಅಪಘಾತ ನಡೆದ ನಂತರ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು. ಆದರೆ, ಹಲವರು ಸಾವನ್ನು ಸಂಭ್ರಮಿಸಿದ್ದರು. ಅದರಲ್ಲಿ ಹೆಚ್ಚಿನವರು ಮುಸ್ಲಿಂರು. ಪಾಕ್ ವಿರುದ್ಧ ತೆಗೆದುಕೊಂಡಿದ್ದ ನಿಲುವುಗಳ ಬಗ್ಗೆಯೂ ಹಲವರು ಕಾಮೆಂಟ್ ಮಾಡಿದ್ದರು.
ಕಾಯಿಲೆ ಗುಣಪಡಿಸುತ್ತೇನೆಂದು ಜೀವ ತೆಗೆದ ಅರ್ಚಕ
ಹಲವರು ಬಿಪಿನ್ ಅವರನ್ನು ಅಗೌರವಿಸಿದ್ದರು. ಆದರೂ ಮುಸ್ಲಿಂ ಧರ್ಮದ ನಾಯಕರು ಈ ಕುರಿತು ಮಾತನಾಡಲಿಲ್ಲ. ಹೀಗಾಗಿಯೇ ನಾನು ಈ ಧರ್ಮದಲ್ಲಿ ಉಳಿಯಲು ಬಯಸುವುದಿಲ್ಲ. ನನ್ನ ಉಡುಗೆಯನ್ನು ನಾನು ಕಳಚಿ ಎಸೆಯುತ್ತಿದ್ದೇನೆ. ಇನ್ನು ಮುಂದೆ ನಾನು ಮುಸ್ಲಿಂ ಆಗಿರುವುದಿಲ್ಲ. ಭಾರತದ ವಿರುದ್ಧ ಎಮೋಜಿಗಳನ್ನು ಕಳುಹಿಸಿದವರಿಗೆ ಇದುವೇ ನನ್ನ ಉತ್ತರ ಎಂದು ಹೇಳಿದ್ದಾರೆ.
ನಾನು ಹಾಗೂ ನನ್ನ ಪತ್ನಿ ಹಿಂದು ಧರ್ಮಕ್ಕೆ ಮತಾಂತರವಾಗುತ್ತಿದ್ದೇವೆ. ಆದರೆ, ಇಬ್ಬರು ಮಕ್ಕಳಿಗೆ ಒತ್ತಡ ಹಾಕುವುದಿಲ್ಲ. ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅಕ್ಬರ್ ಅಲಿ ಹೇಳಿದ್ದಾರೆ.
ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆದರೆ, ಅವರನ್ನು ಹಲವರು ನಿಂದಿಸಿದ್ದರು. ಹೀಗಾಗಿ ಅದನ್ನು ಡಿಲಿಟ್ ಮಾಡಿದ್ದಾರೆ. ಸದ್ಯ ವಾಟ್ಸಪ್ ನಲ್ಲಿ ಈ ವಿಡಿಯೋ ಹರಿದಾಡುತ್ತಿದೆ.