alex Certify BIG NEWS: ಮಗಳ ಹೇಳಿಕೆ ದಾಖಲು ಪ್ರಕ್ರಿಯೆ ಕಾನೂನು ಬಾಹಿರ, ಕಾಂಗ್ರೆಸ್ ಪದಾಧಿಕಾರಿ ಉಪಸ್ಥಿತರಿದ್ದರಿಂದ ಗೌರವಕ್ಕೆ ಧಕ್ಕೆ; ಯುವತಿ ತಂದೆ ಗಂಭೀರ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಗಳ ಹೇಳಿಕೆ ದಾಖಲು ಪ್ರಕ್ರಿಯೆ ಕಾನೂನು ಬಾಹಿರ, ಕಾಂಗ್ರೆಸ್ ಪದಾಧಿಕಾರಿ ಉಪಸ್ಥಿತರಿದ್ದರಿಂದ ಗೌರವಕ್ಕೆ ಧಕ್ಕೆ; ಯುವತಿ ತಂದೆ ಗಂಭೀರ ಆರೋಪ

ಬೆಂಗಳೂರು: ನನ್ನ ಮಗಳ ಹೇಳಿಕೆಯನ್ನು ದಾಖಲಿಸುವಾಗ ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಉಪಸ್ಥಿತರಿದ್ದರು ಎಂದು ಹೈಕೋರ್ಟ್ಗೆ ಸಂತ್ರಸ್ತೆಯ ತಂದೆ ಸಲ್ಲಿಸಿದ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ನನ್ನ ಮಗಳು ಹೇಳಿಕೆ ದಾಖಲಿಸುವ ವೇಳೆ ಉಪಸ್ಥಿತರಿದ್ದರು ಎಂದು ಅವರು ದೂರಿದ್ದಾರೆ. ನನ್ನ ಮಗಳ ಹೇಳಿಕೆ ದಾಖಲು ಪ್ರಕ್ರಿಯೆ ಕಾನೂನು ಬಾಹಿರವಾಗಿದ್ದು, ಮಗಳ ಗೌರವ, ಘನತೆ, ವ್ಯಕ್ತಿತ್ವಕ್ಕೆ ಧಕ್ಕೆ ತರುವ ಬೆಳವಣಿಗೆ ನಡೆದಿದೆ. ಬೇರೆ ಯಾವ ದಾರಿಯೂ ಕಾಣದೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಸಂತ್ರಸ್ತ ಯುವತಿಯ ತಂದೆ ಸ್ಪಷ್ಟನೆ ನೀಡಿದ್ದಾರೆ.

ಒತ್ತಡಕ್ಕೆ ಒಳಗಾಗಿ ನೀಡಿದ ಹೇಳಿಕೆಯನ್ನು ಪರಿಗಣಿಸಬಾರದು. ಆಕೆ ದಾಖಲಿಸಿದ ಹೇಳಿಕೆಯನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ಗೆ ರಿಟ್ ಅರ್ಜಿಯ ಮೂಲಕ ಸಿಡಿ ಯುವತಿಯ ತಂದೆ ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...