ಬಿಯರ್‌ನ ಮಾರಾಟ ಹಾಗೂ ಪೂರೈಕೆ ವಿಚಾರದಲ್ಲಿ ಅಕ್ರಮ ಹೊಂದಾಣಿಕೆ ಮಾಡಿಕೊಂಡಿದ್ದ ಕಾರಣಕ್ಕೆ ಯುನೈಟೆಡ್ ಬ್ರೀವರಿಸ್, ಕಾರ್ಲ್ಸ್‌ಬರ್ಗ್ ಇಂಡಿಯಾ ಮತ್ತು ಅಖಿಲ ಭಾರತ ಬ್ರೀವರ್ಸ್ಸ್ ಸಂಘಟನೆ (ಎಐಬಿಎ) ಹಾಗೂ 11 ವ್ಯಕ್ತಿಗಳಿಗೆ ಒಟ್ಟಾರೆ 873 ಕೋಟಿ ರೂಪಾಯಿಗಳ ದಂಡವನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ವಿಧಿಸಿದೆ.
ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ವಿರುದ್ಧ ನಾಲ್ಕು ವರ್ಷಗಳ ಕಾಲ ಸುದೀರ್ಘ ತನಿಖೆ ನಡೆಸಿದ ಸಿಸಿಐ ಭವಿಷ್ಯದಲ್ಲಿ ಈ ರೀತಿ ಮಾಡದಂತೆ ಮೇಲ್ಕಂಡ ಪಾರ್ಟಿಗಳಿಗೆ ಆದೇಶ ನೀಡಿದೆ.
ನಂಬಲಸಾಧ್ಯವಾದರೂ ಸತ್ಯ: ಪ್ರತೀಕಾರ ತೀರಿಸಿಕೊಳ್ಳಲು 22 ಕಿ.ಮೀ. ದೂರ ಸಾಗಿ ಬಂದ ಕೋತಿ..!
“ಭಾರತದ ಅನೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಯರ್ ಮಾರಾಟ ಹಾಗೂ ಪೂರೈಕೆ ಸಂಬಂಧ ಎಐಬಿಎ ಮುಖಾಂತರ ಒಳಗೊಳಗೇ ತಂತಮ್ಮಲ್ಲೇ ಒಪ್ಪಂದ ಮಾಡಿಕೊಂಡಿವೆ,” ಎಂದು ಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ. ಒಡಿಶಾ, ರಾಜಸ್ತಾನ, ಪಶ್ಚಿಮ ಬಂಗಾಳ, ದೆಹಲಿ ಹಾಗೂ ಪುದುಚೆರಿಗಳಲ್ಲಿ ಈ ಕಂಪನಿಗಳು ಬೆಲೆಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಬಿಯರ್ ಪೂರೈಕೆಯ ಮೇಲೆ ಒಟ್ಟಾಗಿ ನಿರ್ಬಂಧ ಹೇರುತ್ತಿದ್ದವು ಎಂದು ಆಯೋಗ ತಿಳಿಸಿದೆ.