alex Certify CBSE ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CBSE ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಾಹಿತಿ

10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಅಂಕ ಸುಧಾರಣೆಗಾಗಿ ಆಗಸ್ಟ್ 25ರಿಂದ ಸೆಪ್ಟೆಂಬರ್​ 15ರವರೆಗೆ ಪರೀಕ್ಷೆಯನ್ನು ನಡೆಸೋದಾಗಿ ಸಿಬಿಎಸ್​ಇ ಗುರುವಾರ ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿದೆ.

ಸೆಪ್ಟೆಂಬರ್​ 30ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದೂ ಬೋರ್ಡ್​ ತಿಳಿಸಿದೆ.

ಇತ್ತ ಐಸಿಎಸ್​ಇ ಅಂಕ ಸುಧಾರಣೆ ಪರೀಕ್ಷೆಯನ್ನು ಆಗಸ್ಟ್ 16ರಂದು ನಡೆಸಿದ ಸೆಪ್ಟಂಬರ್​ 20ರ ಹಾಗೆ ಫಲಿತಾಂಶವನ್ನು ಪ್ರಕಟಿಸೋದಾಗಿ ಹೇಳಿದೆ.

ನ್ಯಾಯಮೀರ್ತಿ ಎ.ಎಂ ಖಾನ್ವಿಲ್ಕರ್​​​ ಹಾಗೂ ಸಂಜೀತ್​ ಕೃಷ್ಣ ನೇತೃತ್ವದ ನ್ಯಾಯಪೀಠ ಸಿಬಿಎಸ್​ಇ ಹಾಗೂ ಐಸಿಎಸ್​ಇಯ ಪರೀಕ್ಷಾ ವೇಳಾಪಟ್ಟಿಗೆ ಒಪ್ಪಿಗೆ ನೀಡಿದ್ದಾರೆ.

ಕೋರ್ಟ್​ನ ನೋಟಿಸ್​​ಗೆ ಪ್ರತಿಕ್ರಿಯೆ ನೀಡಿರುವ ಎರಡೂ ಮಂಡಳಿಗಳು ವೇಳಾಪಟ್ಟಿ ಪ್ರಮಾಣಪತ್ರವನ್ನು ಕೋರ್ಟ್​ಗೆ ಸಲ್ಲಿಸಿವೆ. ಸಿಬಿಎಸ್​ಇ ಸಲ್ಲಿಸಿದ ಅಫಿಡವಿಟ್​ನಲ್ಲಿ ಕೆಲ ಅಸ್ಪಷ್ಟತೆಗಳಿದ್ದ ಕಾರಣ ಸೂಚನೆಯ ಮೇರೆಗೆ ಸಿಬಿಎಸ್​ಇ ಪರ ವಕೀಲ ಅಂಕ ಸುಧಾರಣೆಗಾಗಿ ಪರೀಕ್ಷೆ ನಡೆಸುತ್ತಿರುವ ಬಗ್ಗೆ ಕೋರ್ಟ್ಗೆ ಮನವರಿಕೆ ಮಾಡಿದರು. 12 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಂಕ ಸುಧಾರಣೆಗೆ ಪರೀಕ್ಷೆ ನಡೆಯಲಿದೆ ಎಂದು ಕೋರ್ಟ್ ಹೇಳಿದೆ.

ಸಿಬಿಎಸ್​ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಗಸ್ಟ್​​ 10ರಂದು ಅಧಿಕೃತ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಬಹುದಾಗಿದೆ. ಆಗಸ್ಟ್​ 25ರಿಂದ ಪರೀಕ್ಷೆ ಆರಂಭವಾಗಲಿದ್ದು ಕೊನೆ ಪರೀಕ್ಷೆ ಸೆಪ್ಟಂಬರ್​ 15ರಂದು ನಡೆಯಲಿದೆ. ಫಲಿತಾಂಶವು ಸೆಪ್ಟೆಂಬರ್​ 30ರಂದು ಘೋಷಣೆಯಾಗಲಿದೆ.

ಐಸಿಎಸ್​ಇ ವಿದ್ಯಾರ್ಥಿಗಳಿಗೆ ಆಗಸ್ಟ್​ 4ರಿಂದಲೇ ನೊಂದಣಿ ಆರಂಭವಾಗಿದೆ. ಆಗಸ್ಟ್​ 16ರಂದು ಪರೀಕ್ಷೆ ನಡೆಯಲಿದ್ದು ಸೆಪ್ಟಂಬರ್​20ರ ಹಾಗೆ ಫಲಿತಾಂಶ ಘೋಷಣೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...