10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಅಂಕ ಸುಧಾರಣೆಗಾಗಿ ಆಗಸ್ಟ್ 25ರಿಂದ ಸೆಪ್ಟೆಂಬರ್ 15ರವರೆಗೆ ಪರೀಕ್ಷೆಯನ್ನು ನಡೆಸೋದಾಗಿ ಸಿಬಿಎಸ್ಇ ಗುರುವಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ.
ಸೆಪ್ಟೆಂಬರ್ 30ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದೂ ಬೋರ್ಡ್ ತಿಳಿಸಿದೆ.
ಇತ್ತ ಐಸಿಎಸ್ಇ ಅಂಕ ಸುಧಾರಣೆ ಪರೀಕ್ಷೆಯನ್ನು ಆಗಸ್ಟ್ 16ರಂದು ನಡೆಸಿದ ಸೆಪ್ಟಂಬರ್ 20ರ ಹಾಗೆ ಫಲಿತಾಂಶವನ್ನು ಪ್ರಕಟಿಸೋದಾಗಿ ಹೇಳಿದೆ.
ನ್ಯಾಯಮೀರ್ತಿ ಎ.ಎಂ ಖಾನ್ವಿಲ್ಕರ್ ಹಾಗೂ ಸಂಜೀತ್ ಕೃಷ್ಣ ನೇತೃತ್ವದ ನ್ಯಾಯಪೀಠ ಸಿಬಿಎಸ್ಇ ಹಾಗೂ ಐಸಿಎಸ್ಇಯ ಪರೀಕ್ಷಾ ವೇಳಾಪಟ್ಟಿಗೆ ಒಪ್ಪಿಗೆ ನೀಡಿದ್ದಾರೆ.
ಕೋರ್ಟ್ನ ನೋಟಿಸ್ಗೆ ಪ್ರತಿಕ್ರಿಯೆ ನೀಡಿರುವ ಎರಡೂ ಮಂಡಳಿಗಳು ವೇಳಾಪಟ್ಟಿ ಪ್ರಮಾಣಪತ್ರವನ್ನು ಕೋರ್ಟ್ಗೆ ಸಲ್ಲಿಸಿವೆ. ಸಿಬಿಎಸ್ಇ ಸಲ್ಲಿಸಿದ ಅಫಿಡವಿಟ್ನಲ್ಲಿ ಕೆಲ ಅಸ್ಪಷ್ಟತೆಗಳಿದ್ದ ಕಾರಣ ಸೂಚನೆಯ ಮೇರೆಗೆ ಸಿಬಿಎಸ್ಇ ಪರ ವಕೀಲ ಅಂಕ ಸುಧಾರಣೆಗಾಗಿ ಪರೀಕ್ಷೆ ನಡೆಸುತ್ತಿರುವ ಬಗ್ಗೆ ಕೋರ್ಟ್ಗೆ ಮನವರಿಕೆ ಮಾಡಿದರು. 12 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಂಕ ಸುಧಾರಣೆಗೆ ಪರೀಕ್ಷೆ ನಡೆಯಲಿದೆ ಎಂದು ಕೋರ್ಟ್ ಹೇಳಿದೆ.
ಸಿಬಿಎಸ್ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಗಸ್ಟ್ 10ರಂದು ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ ಮಾಡಬಹುದಾಗಿದೆ. ಆಗಸ್ಟ್ 25ರಿಂದ ಪರೀಕ್ಷೆ ಆರಂಭವಾಗಲಿದ್ದು ಕೊನೆ ಪರೀಕ್ಷೆ ಸೆಪ್ಟಂಬರ್ 15ರಂದು ನಡೆಯಲಿದೆ. ಫಲಿತಾಂಶವು ಸೆಪ್ಟೆಂಬರ್ 30ರಂದು ಘೋಷಣೆಯಾಗಲಿದೆ.
ಐಸಿಎಸ್ಇ ವಿದ್ಯಾರ್ಥಿಗಳಿಗೆ ಆಗಸ್ಟ್ 4ರಿಂದಲೇ ನೊಂದಣಿ ಆರಂಭವಾಗಿದೆ. ಆಗಸ್ಟ್ 16ರಂದು ಪರೀಕ್ಷೆ ನಡೆಯಲಿದ್ದು ಸೆಪ್ಟಂಬರ್20ರ ಹಾಗೆ ಫಲಿತಾಂಶ ಘೋಷಣೆಯಾಗಲಿದೆ.