alex Certify CBSE 10, 12ನೇ ತರಗತಿ ಪರೀಕ್ಷೆಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CBSE 10, 12ನೇ ತರಗತಿ ಪರೀಕ್ಷೆಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12ನೇ ತರಗತಿಯ ಪರೀಕ್ಷಾ ದಿನಾಂಕದ ತಾತ್ಕಾಲಿಕ ಮಾಹಿತಿಯನ್ನು ನೀಡಲಾಗಿದೆ. 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿಯಲ್ಲಿ ನಡೆಸಲಾಗುವುದು ಮತ್ತು ಮಾರ್ಚ್‌ನಲ್ಲಿ ಮುಕ್ತಾಯಗೊಳಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪರೀಕ್ಷೆಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಶಾಲೆಗಳು ಫೆಬ್ರವರಿ 15 ರಿಂದ ಮೇ 15, 2023 ರ ನಡುವೆ ಯಾವುದೇ ಚಟುವಟಿಕೆಗಳನ್ನು ಮಾಡದಂತೆ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

“ಪರೀಕ್ಷೆಯ ನಂತರ ಶಾಲೆಗಳು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಈ ನಡುವಿನ ಅವಧಿಯಲ್ಲಿ ಶಾಲೆಗಳ ಆವರಣದಲ್ಲಿ ಯಾವುದೇ ನಿರ್ಮಾಣ ಅಥವಾ ನವೀಕರಣ ಕಾರ್ಯಗಳನ್ನು ತಪ್ಪಿಸಬೇಕು. ಪರೀಕ್ಷೆಗಳು/ಮೌಲ್ಯಮಾಪನ ಸಂಬಂಧಿತ ಚಟುವಟಿಕೆಗಳು ಮಾತ್ರ ನಡೆಸಬೇಕು” ಎಂದು ಸ್ಪಷ್ಟಪಡಿಸಲಾಗಿದೆ.

ಇದಲ್ಲದೆ, ಸರಿಯಾದ ವೈದ್ಯಕೀಯ ಕಾರಣಗಳೊಂದಿಗೆ ಸಮರ್ಥಿಸದ ಹೊರತು, ಹೇಳಿದ ಅವಧಿಯಲ್ಲಿ ಯಾವುದೇ ರಜೆಗಳನ್ನು ಮಂಜೂರು ಮಾಡದಂತೆ ಮಂಡಳಿಯು ಶಾಲೆಗಳಿಗೆ ನಿರ್ದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...