alex Certify CBSE 10ನೇ ತರಗತಿ ಮಕ್ಕಳಿಗೆ ಮತ್ತೆ ನಿರಾಸೆ: ಇವತ್ತಿಲ್ಲ ರಿಸಲ್ಟ್‌, ಮಂಡಳಿಯಿಂದಲೇ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CBSE 10ನೇ ತರಗತಿ ಮಕ್ಕಳಿಗೆ ಮತ್ತೆ ನಿರಾಸೆ: ಇವತ್ತಿಲ್ಲ ರಿಸಲ್ಟ್‌, ಮಂಡಳಿಯಿಂದಲೇ ಸ್ಪಷ್ಟನೆ

ಫಲಿತಾಂಶದ ನಿರೀಕ್ಷೆಯಲ್ಲಿದ್ದ CBSE 10ನೇ ತರಗತಿ ಮಕ್ಕಳಿಗೆ ನಿರಾಸೆಯಾಗಿದೆ. ಇಂದು ಸಿಬಿಎಸ್‌ಸಿ 10ನೇ ತರಗತಿ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಮಂಡಳಿ ಖಚಿತಪಡಿಸಿದೆ.  ಇಂದು ಬೆಳಗ್ಗೆ 11 ಗಂಟೆಗೆ cbse.gov.in ಮತ್ತು cbseresults.nic.in ನಲ್ಲಿ ಫಲಿತಾಂಶಗಳನ್ನು ಅಪ್‌ಲೋಡ್ ಮಾಡಬೇಕಿತ್ತು, ಆದರೆ ಫಲಿತಾಂಶ ಪ್ರಕಟವಾಗಿಲ್ಲ. ರಿಸಲ್ಟ್‌ ಪ್ರಕಟವಾಗುವ ಅಧಿಕೃತ ದಿನಾಂಕವನ್ನು ಕೂಡ ಮಂಡಳಿ ಬಹಿರಂಗಪಡಿಸಿಲ್ಲ.

ಏಪ್ರಿಲ್ 26 ರಿಂದ ಮೇ 24ರವರೆಗೆ ಟರ್ಮ್ 2 ಪರೀಕ್ಷೆಗಳು ನಡೆದಿದ್ದವು. 21 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. CBSE, ‘ಪರೀಕ್ಷಾ ಸಂಗಮ್’ ಎಂಬ ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಿದೆ, ಇದರಲ್ಲಿ ಪರೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ವರ್ಷ, ಮಂಡಳಿಯಿಂದ ‘ಫೇಲ್’ ಪದವನ್ನು ಬದಲಾಯಿಸಿ ‘ಎಸೆನ್ಷಿಯಲ್ ರಿಪೀಟ್’ ಎಂದು ಹಾಕಲಾಗ್ತಿದೆ.

ಫಲಿತಾಂಶಗಳನ್ನು ನೋಡಲು ವಿದ್ಯಾರ್ಥಿಗಳು ಎರಡು ವೆಬ್‌ಸೈಟ್‌ಗಳಲ್ಲಿ ಯಾವುದಾದರೂ ಒಂದಕ್ಕೆ ಲಾಗ್ ಇನ್ ಮಾಡಬಹುದು: cbse.gov.in ಅಥವಾ cbseresults.nic.in.

ಮೊದಲು ಮೇನ್‌ಪೇಜ್‌ನ 10ನೇ ತರಗತಿಯ CBSE ಟರ್ಮ್ 2 ಫಲಿತಾಂಶಕ್ಕಾಗಿ ಒದಗಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ.

ನಿಮ್ಮ ರೋಲ್ ನಂಬರ್‌, ಶಾಲೆಯ ಕೋಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

ನಿಮ್ಮ ಪರೀಕ್ಷಾ ಫಲಿತಾಂಶ ಸ್ಕ್ರೀನ್‌ ಮೇಲೆ ಲಭ್ಯವಾಗುತ್ತದೆ.

ಫಲಿತಾಂಶವನ್ನು ಡೌನ್ಲೋಡ್‌ ಮಾಡಿಕೊಂಡು ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಡಿಜಿಲಾಕರ್ ಅಪ್ಲಿಕೇಶನ್ ಮೂಲಕ ಪಡೆಯಬಹುದು ಪರೀಕ್ಷೆಯ ಫಲಿತಾಂಶ…

ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಕೂಡ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಪಡೆಯಬಹುದು. ಆಪಲ್‌ನ ಆಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್ ಎರಡರಲ್ಲೂ ಇದು ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ವಲಸೆ ಪ್ರಮಾಣಪತ್ರ, ಉತ್ತೀರ್ಣ ಪ್ರಮಾಣ ಪತ್ರ, ಕೌಶಲ್ಯ ಪ್ರಮಾಣಪತ್ರ ಇತ್ಯಾದಿಗಳನ್ನು ಸಹ ಈ ಅಪ್ಲಿಕೇಶನ್‌ ಮೂಲಕ ಪಡೆಯಬಹುದು. CBSE ಡಿಜಿಲಾಕರ್ ರುಜುವಾತುಗಳನ್ನು ವಿದ್ಯಾರ್ಥಿಗಳಿಗೆ SMS ಮೂಲಕ ಕಳುಹಿಸಿದೆ. ಮೂಲಗಳ ಮಾಹಿತಿ ಪ್ರಕಾರ, ಸಿಬಿಎಸ್‌ಇ 12ನೇ ತರಗತಿ ಫಲಿತಾಂಶಗಳನ್ನು ಜುಲೈ 10 ರಂದು ಪ್ರಕಟಿಸುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...