alex Certify ವೃದ್ಧೆ ಹಿಂಬಾಲಿಸಿ ಬ್ಯಾಗ್​ ಎಗರಿಸಿದ ಕಳ್ಳ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧೆ ಹಿಂಬಾಲಿಸಿ ಬ್ಯಾಗ್​ ಎಗರಿಸಿದ ಕಳ್ಳ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ

67 ವರ್ಷದ ವೃದ್ಧೆಯ ಬ್ಯಾಗ್​​ನ್ನು ಕಳ್ಳನೊಬ್ಬ ಎಗರಿಸಿದ ಆಘಾತಕಾರಿ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೆಹಲಿಯಲ್ಲಿ ನಡೆದಿರುವ ಘಟನೆ ಇದಾಗಿದ್ದು ಪ್ರಕರಣ ಸಂಬಂಧ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ದೆಹಲಿಯ ಸಿಆರ್​ ಪಾರ್ಕ್​ ಪ್ರದೇಶದಲ್ಲಿ ಶನಿವಾರ ರಾತ್ರಿ 9:45ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

29 ಸೆಕೆಂಡ್​ಗಳ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ವೃದ್ಧೆ ಕಾರು ಪಾರ್ಕಿಂಗ್​ ಜಾಗದೆಡೆಗೆ ನಡೆದುಕೊಂಡು ಹೋಗುತ್ತಿದ್ದ ಕಳ್ಳ ಆಕೆಯನ್ನೇ ಹಿಂಬಾಲಿಸುತ್ತಾ ಇರೋದನ್ನ ನೀವು ಕಾಣಬಹುದಾಗಿದೆ.

ವೃದ್ಧೆಯ ಬ್ಯಾಗ್​​ನ್ನು ಕಸಿದುಕೊಂಡಿದ್ದಾನೆ. ಬ್ಯಾಗ್​ನ್ನು ಹಿಡಿದುಕೊಳ್ಳಲು ಮುಂದಾದ ವೇಳೆ ಆಯತಪ್ಪಿದ ವೃದ್ಧೆ ರಸ್ತೆ ಮೇಲೆ ಬಿದ್ದಿದ್ದಾರೆ. ಅಷ್ಟರಲ್ಲಾಗಲೇ ಬ್ಯಾಗ್​ನ್ನು ಕಸಿಯುವಲ್ಲಿ ಯಶಸ್ವಿಯಾಗಿದ್ದ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಬಿದ್ದ ಜಾಗದಿಂದ ಎದ್ದ ವೃದ್ದೆ ಹೇಗೋ ಸುಧಾರಿಸಿಕೊಂಡು ಅಲ್ಲಿಂದ ಕಾರಿನ ಬಳಿ ನಡೆದುಕೊಂಡು ಬಂದು ಹಾಗೆಯೇ ಮುಂದಕ್ಕೆ ನಡೆದಿದ್ದಾರೆ. ಬಹುಶಃ ವೃದ್ಧೆ ತಮ್ಮ ಮನೆಯೊಳಕ್ಕೆ ಹೋಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರಕರಣ ಸಂಬಂಧ ಮೊದಲು ಒಬ್ಬನನ್ನ ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಇನ್ನಿಬ್ಬರನ್ನ ಖೆಡ್ಡಾಗೆ ಕೆಡುವುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ನಡೆದ 24 ಗಂಟೆಗಳ ಒಳಗಾಗಿ ಪೊಲೀಸರು ಬ್ಯಾಗ್​ ಸಮೇತ ಕಳ್ಳರನ್ನ ಪತ್ತೆ ಹಚ್ಚಿದ್ದಾರೆ. ಕಳ್ಳರಿಂದ ವೃದ್ಧೆಯ ಬ್ಯಾಗ್​, ಹಣ, ಮೊಬೈಲ್​ ಫೋನ್​ ಹಾಗೂ ಐಡಿ ಕಾರ್ಡ್​ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...