ಜನನಿಬಿಡ ಹೆದ್ದಾರಿಯಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ್ದು, ಈ ಅಪರೂಪದ, ನಂಬಲಾಗದ ಕ್ಷಣ ವಿಮಾನದ ರೆಕ್ಕೆಯ ಮೇಲೆ ಇರಿಸಲಾದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜುಲೈ3 ರಂದು ಪೈಲಟ್ ವಿಸೆಂಟ್ ಫ್ರೇಸರ್ ತನ್ನ ಮಾವನೊಂದಿಗೆ ಸಿಂಗಲ್ ಎಂಜಿನ್ ವಿಮಾನವನ್ನು ಹಾರಿಸುತ್ತಿದ್ದಾಗ ವಿಮಾನದ ಎಂಜಿನ್ ಕೈಕೊಡಲು ಆರಂಭಿಸಿತು. ಈ ಸಂದರ್ಭದಲ್ಲಿ ಎದುರಿಗೆ ಕಾಣಿಸಿದೆ ಉತ್ತರ ಕೆರೊಲಿನಾದ ಫೋರ್-ಲೇನ್ ಹೆದ್ದಾರಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಲೇಬೇಕಾಯಿತು.
ಈ ಅಪರೂಪದ ಸನ್ನಿವೇಶದ ಹಾಗೂ ಆತಂಕದಲ್ಲಿ ಲ್ಯಾಂಡ್ ಮಾಡಿದ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಹಂಚಿಕೊಂಡಿದ್ದಾರೆ.
ಆ ವಿಡಿಯೋ ಕ್ಲಿಪ್ನಲ್ಲಿ ವಿಮಾನವು ತೀರಾ ಕೆಳಮಟ್ಟದಲ್ಲಿ ಕೆಳಕ್ಕೆ ಹಾರುತ್ತಿರುವಂತೆ ಕಾಣುತ್ತದೆ, ರಸ್ತೆಯಲ್ಲಿ ಹಲವಾರು ಕಾರುಗಳ ಸಾಗುವುದೂ ಸಹ ಕಾಣಿಸುತ್ತದೆ. ವಿದ್ಯುತ್ ತಂತಿಗಳಲೂ ಕಾಣಿಸುತ್ತದೆ. ಈ ನಡುವೆಯೂ ಫ್ರೇಸರ್ ವಿಮಾನವನ್ನು ರಸ್ತೆಯ ಮೇಲೆ ಸರಾಗವಾಗಿ ಇಳಿಸಲು ಸಾಧ್ಯವಾಯಿತು. ಕೊನೆಯಲ್ಲಿ ವಿಮಾನ ಹೆದ್ದಾರಿಯಿಂದ ಪಕ್ಕದ ರಸ್ತೆಗೆ ತಿರುಗಿನಿಂತಿತು.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. “ಅತ್ಯುತ್ತಮ” ಲ್ಯಾಂಡಿಂಗ್ ಅನ್ನು ಶ್ಲಾಘಿಸಿದೆ. ದುರಂತವಾಗಬಹುದಾದ ಹಲವು ವಿಷಯಗಳಿದ್ದವು ಆದರೆ ಅವು ಸಂಭವಿಸಲಿಲ್ಲ ಎಂದು ಕೆಲವರು ಅಚ್ಚರಿಪಟ್ಟಿದ್ದಾರೆ.
ವಿನ್ಸೆಂಟ್ ಫ್ರೇಸರ್ ಅವರು ಫ್ಲೋರಿಡಾದ ಮರೈನ್ ಕ್ಷೇತ್ರದಲ್ಲಿ ಪರಿಣತರಾಗಿದ್ದಾರೆ. ಇತ್ತೀಚೆಗೆ ಪೈಲಟ್ ಪರವಾನಗಿಯನ್ನು ಪಡೆದರು. ಸುಮಾರು ಒಂದು ವರ್ಷದ ವಿಮಾನ ಹಾರಾಟದ ಅನುಭವವನ್ನು ಹೊಂದಿದ್ದಾರೆ.
ಈ ಕ್ಷಣವನ್ನು ನೆನಪಿಸಿಕೊಂಡು ಪ್ರತಿಕ್ರಿಯೆ ನೀಡಿರುವ ಫ್ರೇಸರ್ ವಿಂಕ್, ನಾನು ಜೆಫ್ (ಮಾವ) ರನ್ನು ಉಳಿಸಬೇಕಾಗಿತ್ತು, ಭೂಮಿ ಮೇಲೆ ಜನರನ್ನು ಉಳಿಸುವುದು ನನ್ನ ಉದ್ದೇಶವಾಗಿತ್ತು. ಸಾಧ್ಯವಾದಷ್ಟು ಕಡಿಮೆ ಹಾನಿಯಾಗುವಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದಿದ್ದಾರೆ.
ಜಾಲತಾಣ ಬಳಕೆದಾರರು ಹೊಸ ಪೈಲಟ್ ಅವರ ಅದ್ಭುತ ಕೆಲಸವನ್ನು ಪ್ರಶಂಸಿಸಿದ್ದಾರೆ. “ಇದು ಅದ್ಭುತವಾಗಿದೆ! ಹೆದ್ದಾರಿಯಲ್ಲಿ ಕಾರು ಓಡಿಸುವುದಕ್ಕಿಂತ ಉತ್ತಮವಾಗಿ ಹೆದ್ದಾರಿಯಲ್ಲಿ ವಿಮಾನವನ್ನು ಓಡಿಸಿದರು ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.