alex Certify ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ಕಾರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ ಕಾರ್…!

ಚಿಕಾಗೋ: ಒಂದು ಪ್ರದೇಶದಲ್ಲಿ ನಡೆಯಲಿರುವ ಯೋಜನೆ ಬಗ್ಗೆ ವರದಿಗಾರರೊಬ್ಬರು ಲೈವ್ ಸುದ್ದಿ ಪ್ರಸಾರ ಮಾಡುತ್ತಿರಬೇಕಾದರೆ ಸರೋವರದಲ್ಲಿ ಕಾರ್ ಒಂದು ಮುಳುಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಸುದ್ದಿ ಚಾನೆಲ್ ಒಂದರ ವರದಿಗಾರ ಜಾಕೋಬ್ ಎಮರ್ಸನ್ ಎಂಬಾತ ಇಲಿನಾಯ್ಸ್ ನ ಸ್ಟ್ರಿಂಗ್ ಫೀಲ್ಡ್ ಪಟ್ಟಣದ ಸಂಗಮನ್ ಕೌಂಟಿಯಲ್ಲಿರುವ ಸ್ಪೌಲ್ಡಿಂಗ್ ಡ್ಯಾಮ್ ನಲ್ಲಿನ ಯೋಜನೆಗೆ ಸಂಬಂಧಿಸಿದ ವಿಚಾರವನ್ನು ನೇರಪ್ರಸಾರ ಮಾಡುತ್ತಿದ್ದರು. ಈ ವೇಳೆ ಅವರ ಹಿಂದೆ ನಿಂತಿದ್ದ ಬಿಳಿ ಬಣ್ಣದ ಕಾರ್ ನಿಧಾನವಾಗಿ ಹಿಂದಕ್ಕೆ ಚಲಿಸಿ ಸರೋವರದಲ್ಲಿ ಮುಳುಗಿದೆ.

ಕಂಚಿನ ಪದಕವನ್ನು ʼಕೊರೊನಾ ವಾರಿಯರ್ಸ್ʼ​ಗೆ ಅರ್ಪಿಸಿದ ಟೀಂ ಇಂಡಿಯಾ ಹಾಕಿ ತಂಡ..!

ಅದೃಷ್ಟವಶಾತ್ ಅದರಲ್ಲಿ ಯಾರೂ ಇರಲಿಲ್ಲ ಎಂಬುದು ಖಚಿತವಾಯಿತು. ಅಲ್ಲದೆ ಸಂಗಮನ್ ಕೌಂಟಿಯ ರಕ್ಷಣಾ ಪಡೆಯು ಟ್ರಕ್ ನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕೆಲವರು ಚಾಲಕನ ಕಾಳಜಿ ಬಗ್ಗೆ ಕಮೆಂಟ್ ಮಾಡಿದ್ದರೆ ಇನ್ನು ಕೆಲವರು ಹಾಸ್ಯಭರಿತ ಕಮೆಂಟ್ ಗಳನ್ನು ಮಾಡಿದ್ದಾರೆ. ‘ಚಾಲಕ ಅದನ್ನು ವಿಮಾ ಕಂಪನಿಗೆ ಹೇಗೆ ವಿವರಿಸುತ್ತಾನೆ’ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Last night, SCRS responded to Spaulding Dam boat launch at Lake Springfield to assist with the recovery of a submerged vehicle. No injuries were reported with this incident.

Posted by Sangamon Co. Rescue Squad on Friday, July 30, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...