ನಿಯಂತ್ರಣ ತಪ್ಪಿದ್ದ ಬೈಕ್ ಬಟ್ಟೆ ಅಂಗಡಿಗೆ ನುಗ್ಗಿದ ಪರಿಣಾಮ ಬೈಕ್ ಸವಾರ ಕೌಂಟರ್ನೊಳಕ್ಕೆ ಹೋಗಿ ಬಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಈ ಆಘಾತಕಾರಿ ಘಟನೆಯ ಸಿಸಿ ಟಿವಿ ದೃಶ್ಯಾವಳಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಟ್ಟೆ ಅಂಗಡಿಯಲ್ಲಿ ಬಟ್ಟೆ ಕೊಳ್ಳಲು ಬಂದಿದ್ದ ಗ್ರಾಹಕರು ಅಂಗಡಿಯೊಳಗೆ ಏಕಾ ಏಕಿ ಬೈಕ್ ನುಗ್ಗಿದ್ದನ್ನು ಕಂಡು ದಿಗ್ಬ್ರಾಂತರಾಗಿದ್ದಾರೆ.
ಕೌಂಟರ್ನ ಒಳಗೆ ಓರ್ವ ಯುವತಿ ಹಾಗೂ ಕೌಂಟರ್ನ ಹೊರಗಡೆ ಮೂವರು ಸ್ಟೂಲ್ ಮೇಲೆ ಕುಳಿತು ಮಾತನಾಡುತ್ತಿದ್ದರು. ಇದೇ ವೇಳೆ ಏಕಾಏಕಿ ಬಂದ ಬೈಕ್ ಕೌಂಟರ್ನ ಹೊರಗೆ ಬಿದ್ದಿದೆ. ಹಾಗೂ ಬೈಕ್ ಸವಾರ ಕೌಂಟರ್ ಒಳಕ್ಕೆ ಬಿದ್ದಿದ್ದಾನೆ. ಕೌಂಟರ್ ಒಳಗಿದ್ದ ಯುವತಿ ಹಾಗೂ ಹೊರಗಿದ್ದ ಮೂವರಿಗೆ ಯಾವುದೇ ಹಾನಿ ಉಂಟಾಗಿಲ್ಲ.
ತೆಲಂಗಾಣದ ಖಮ್ಮಮ್ ಜಿಲ್ಲೆಯ ರಾವಿಚೆಟ್ಟು ಬಜಾರ್ನಲ್ಲಿ ಈ ಘಟನೆ ಸಂಭವಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಜಾಜ್ ಪಲ್ಸರ್ ಬೈಕ್ನ್ನು ವಶಕ್ಕೆ ಪಡೆದಿದ್ದಾರೆ .