alex Certify ಫಾದರ್‌ ಸಮಯ ಪ್ರಜ್ಞೆಯಿಂದ ಚರ್ಚ್‌ ನಲ್ಲಿ ಗನ್‌ ಹಿಡಿದು ಬೆದರಿಸಿದಾತ ಈಗ ಪೊಲೀಸರ ಅತಿಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಾದರ್‌ ಸಮಯ ಪ್ರಜ್ಞೆಯಿಂದ ಚರ್ಚ್‌ ನಲ್ಲಿ ಗನ್‌ ಹಿಡಿದು ಬೆದರಿಸಿದಾತ ಈಗ ಪೊಲೀಸರ ಅತಿಥಿ

ಚರ್ಚ್‌ವೊಂದರಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಎಂದಿನಂತೆ ವಾದ್ಯಗಳ ಸಂಗೀತ ಕೂಡ ಪ್ರಾರ್ಥನೆಗೆ ಸಾಥ್‌ ನೀಡಿತ್ತು. ನೆರೆದಿದ್ದ ಜನರು ಭಕ್ತಿಯಿಂದ ದೇವರ ಸ್ತುತಿಯನ್ನು ಹಾಡುತ್ತಿದ್ದರು. ಇದೇ ವೇಳೆ ಏಕಾಏಕಿಯಾಗಿ ಯುವಕನೊಬ್ಬ ಕೈನಲ್ಲಿ ಗನ್‌ ಹಿಡಿದು, ಫಾದರ್‌ ಇದ್ದಂತಹ ವೇದಿಕೆ ಏರಿದ.

ಜನರಿಗೆ ತನ್ನ ಕೈನಲ್ಲಿದ್ದ ಗನ್‌ ತೋರಿಸಲು, ಯುವಕ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿಕೊಂಡು ಬೀಸತೊಡಗಿದ. ಪಾಪ, ದೇವರ ಪ್ರಾರ್ಥನೆಗಾಗಿ ಸೇರಿದ್ದವರು ಗಾಬರಿಯಿಂದ ನಡುಗಲು ಆರಂಭಿಸಿದರು. ಈ ವೇಳೆ ತಮ್ಮ ಸಮಯ ಪ್ರಜ್ಞೆ ಮತ್ತು ಶೌರ್ಯ ಮೆರೆದ ಫಾದರ್‌, ಜನರ ಪಾಲಿಗೆ ’’ಹೀರೋ’’ ಎನಿಸಿದರು.

BIG NEWS: ಸಿಎಂ ಬೊಮ್ಮಾಯಿ ಬದಲಾವಣೆ ನೂರಕ್ಕೆ ನೂರರಷ್ಟು ಸತ್ಯ ಎಂದ ಮಾಜಿ ಸಚಿವ

ಅಮೆರಿಕದ ನ್ಯಾಶ್‌ವಿಲ್ಲೆಲೈಟ್‌ ಮಿಷನ್‌ ಪೆಂಟೆಕೋಸ್ಟಲ್‌ ಚರ್ಚ್‌ನಲ್ಲಿ ಈ ಘಟನೆ ನಡೆದಿದೆ. ಫಾದರ್‌ ಇಜಿಕಿಲ್‌ ನಿಕುಮಾನ ಅವರು ಗನ್‌ಮ್ಯಾನ್‌ ಬಗಾಂಡ ಎಂಬಾತನಿಂದ ಗನ್‌ ಕಸಿದು ಪ್ರಾರ್ಥನೆಗೆ ನೆರೆದಿದ್ದ ಜನರನ್ನು ಪಾರು ಮಾಡಿದ್ದಾರೆ.

ಆತ ಗನ್‌ ಹಿಡಿದು ಕೈ ಬೀಸುತ್ತಿರುವುದನ್ನು ವೇದಿಕೆ ಮೇಲೆ ಗಮನಿಸಿದ ಕೂಡಲೇ, ಅವರು ತಮ್ಮ ಪವಿತ್ರ ಪುಸ್ತಕವನ್ನು ಪಕ್ಕದಲ್ಲಿ ಇರಿಸಿದ್ದಾರೆ. ಕೂಡಲೇ ಆತನ ಮೇಲೆರಗಿ, ಕೈಗಳನ್ನು ಬಿಗಿಯಾಗಿ ಲಾಕ್‌ ಮಾಡಿಕೊಂಡು ವೇದಿಕೆಯ ಹಿಂಬದಿಗೆ ಎಳೆದೊಯ್ದಿದ್ದಾರೆ.

ಅಲ್ಲಿ ಆತನನ್ನು ನೆಲಕ್ಕೆ ಉರುಳಿಸಿ, ಕೈನಲ್ಲಿದ್ದ ಗನ್‌ ಕಸಿದಿದ್ದಾರೆ. ಅದರಲ್ಲಿದ್ದ ಬುಲೆಟ್‌ಗಳನ್ನು ಹೊರಕ್ಕೆ ತೆಗೆದು ಬಿಸಾಡಿದ್ದಾರೆ. ಈ ಮೂಲಕ ಗನ್‌ ನಿಷ್ಕ್ರಿಯಗೊಳಿಸಿ, ಬಗಾಂಡನಿಂದ ಯಾರಿಗೂ ಹಾನಿ ಆಗದಂತೆ ತಡೆದಿದ್ದಾರೆ.

ಕಾರ್ಮಿಕರ ಖಾತೆಗೆ 3 ಸಾವಿರ ರೂ. ಜಮಾ: ಇಲ್ಲಿದೆ ಮುಖ್ಯ ಮಾಹಿತಿ

ಫಾದರ್‌ ಅವರು ಶೌರ್ಯದ ಕ್ರಮವನ್ನು ನ್ಯಾಶ್‌ವಿಲ್ಲೆ ಪೊಲೀಸ್‌ ಇಲಾಖೆ ಶ್ಲಾಘಿಸಿದೆ. ಪ್ರಾರ್ಥನೆಗೆ ನೆರೆದಿದ್ದ ಜನರು ಬಗಾಂಡನ ಕೈನಲ್ಲಿ ಗನ್‌ ಕಂಡಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ಗೌಪ್ಯವಾಗಿ ಸುದ್ದಿ ಮುಟ್ಟಿಸಿದ್ದಾರೆ. ಅವರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ 26 ವರ್ಷದ ಬಗಾಂಡನ ಬಳಿ ಗನ್‌ ಇರಲಿಲ್ಲ, ಜತೆಗೆ ಗನ್‌ನಲ್ಲಿ ಬುಲೆಟ್‌ ಕೂಡ ಇರಲಿಲ್ಲ. ಆತ ಮಂಕಾಗಿ ನಿಂತಿದ್ದ.

ಫಾದರ್‌ ಅವರ ಶೌರ್ಯದ ಕೆಲಸಕ್ಕೆ ಚರ್ಚ್‌ನಲ್ಲಿ ನೆರೆದಿದ್ದ ಜನರೆಲ್ಲರೂ ಅತೀವ ಮೆಚ್ಚಿಗೆ ವ್ಯಕ್ತಪಡಿಸಿ, ದೇವರೇ ಅವರ ರೂಪದಲ್ಲಿ ಬಂದು ಕಾಪಾಡಿದ್ದಾನೆ ಎಂದು ಕೊಂಡಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...