alex Certify ಫಿಫಾ ವಿಶ್ವಕಪ್​ನಲ್ಲಿ ಗಮನ ಸೆಳೆದ ಬೆಕ್ಕುಗಳು: ಆಟಗಾರರೂ ಫಿದಾ- ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಫಾ ವಿಶ್ವಕಪ್​ನಲ್ಲಿ ಗಮನ ಸೆಳೆದ ಬೆಕ್ಕುಗಳು: ಆಟಗಾರರೂ ಫಿದಾ- ವಿಡಿಯೋ ವೈರಲ್

ಕತಾರ್​: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಹಲವು ಅಚ್ಚರಿಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಬೆಕ್ಕುಗಳು. ಫಿಫಾ ಆಟ ನೋಡಲು ಬಂದ ಬೆಕ್ಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಈ ಬೆಕ್ಕುಗಳ ಮಹಿಮೆ ಎಷ್ಟಿದೆ ಎಂದರೆ ಆಟಗಾರರು ಕೂಡ ಬೆಕ್ಕಿಗೆ ಫಿದಾ ಆಗಿದ್ದಾರೆ.

ಬೆಕ್ಕುಗಳು ಟೂರ್ನಮೆಂಟ್ ನಡೆಯುವ ಸ್ಥಳದಲ್ಲಿ ಓಡಾಡುವ ವಿಡಿಯೋ ವೈರಲ್​ ಆಗಿದ್ದು, ಇದನ್ನು ರಾಯಿಟರ್ಸ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ, ಇದಕ್ಕೆ ‘ಕ್ಯಾಟ್-ಆರ್ ವರ್ಲ್ಡ್ ಕಪ್’ ಎಂದು ಶೀರ್ಷಿಕೆ ನೀಡಲಾಗಿದೆ. ವಿಡಿಯೋದಲ್ಲಿ ರೋಮದಿಂದ ಕೂಡಿದ ಬೆಕ್ಕುಗಳು ಓಡಾಡುವುದನ್ನು ನೋಡಬಹುದು.

ಬ್ರೆಜಿಲ್‌ನ ವಿನಿಸಿಯಸ್ ಜೂನಿಯರ್ ಅವರ ಪತ್ರಿಕಾಗೋಷ್ಠಿಯ ಮೇಜಿನ ಬಳಿ ಬರುವ ಬೆಕ್ಕು ಕೂಡ ಜನರ ಗಮನ ಸೆಳೆಯುತ್ತಿದೆ. ಬೆಕ್ಕನ್ನು ಈ ಆಟಕ್ಕೆ ಕರೆತರಲು ಮ್ಯಾನೇಜರ್ ಆನ್‌ಲೈನ್‌ನಲ್ಲಿ ದೊಡ್ಡ ಪ್ರಮಾಣದ ಟೀಕೆಗಳನ್ನು ಪಡೆದಿರಬೇಕು ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...