ಬೇಕಾಗುವ ಪದಾರ್ಥಗಳು : ಕಡಲೆ ಹಿಟ್ಟು- 1 ಕಪ್, ಗೋಡಂಬಿ – 1 ಕಪ್, ತುಪ್ಪ- 1 ಕಪ್, ಸಕ್ಕರೆ – 2 ಕಪ್.
ತಯಾರಿಸುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು 1 ಚಮಚ ತುಪ್ಪ ಹಾಕಿ. ಹಸಿ ವಾಸನೆ ಹೋಗುವವರೆಗೂ ಹುರಿದು ಕೆಳಗಿಳಿಸಿ. ಗೋಡಂಬಿ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಬಾಣಲೆ ಒಲೆಯ ಮೇಲಿಟ್ಟು ಸಕ್ಕರೆಗೆ 1/2 ಕಪ್ ನೀರು ಹಾಕಿ ಒಂದೆಳೆ ಪಾಕವಾಗಲು ಬಿಡಿ. ನಂತರ ಹುರಿದ ಕಡಲೆಹಿಟ್ಟು ಜರಡಿ ಹಿಡಿದು ಮೇಲಿನ ಸಕ್ಕರೆ ಪಾಕಕ್ಕೆ ಹಾಕಿ.
ಬಳಿಕ ಗೋಡಂಬಿ ಪುಡಿ ಹಾಕಿ ತೊಳಸಿ. ಆಗಾಗ್ಗೆ ಅದಕ್ಕೆ ತುಪ್ಪ ಹಾಕಿ ತೊಳಸುತ್ತಾ ಇರಿ. ಪಾಕ ಕಣ್ಣು ಬಿಡುತ್ತಾ ಬಂದು ಮೇಲೆ ಉಬ್ಬಿ ಬರುತ್ತಿದ್ದಂತೆಯೇ ತುಪ್ಪ ಸವರಿದ ತಟ್ಟೆಗೆ ಹಾಕಿ. ತಣ್ಣಗಾದ ಮೇಲೆ ತುಂಡು ಮಾಡಿ. ಸವಿಯಾದ ಮೈಸೂರು ಪಾಕ್ ಸವಿಯಲು ಈಗ ಸಿದ್ಧ.