ಗುಜರಾತ್ ನಲ್ಲಿ ಸಿ.ಜಿ.ಎಸ್.ಟಿ. ಸಹಾಯಕ ಆಯುಕ್ತರಿಂದ 42 ಲಕ್ಷ ರೂಪಾಯಿ ನಗದು, ವಿದೇಶಿ ಕರೆನ್ಸಿಗಳು, ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಗುಜರಾತ್ ನ ಗಾಂಧಿಧಾಮ್ ನಲ್ಲಿರುವ ಸಿಜಿಎಸ್ಟಿ ಸಹಾಯಕ ಆಯುಕ್ತರ ನಿವಾಸದಲ್ಲಿ ನಡೆಸಿದ ಶೋಧದಲ್ಲಿ 42 ಲಕ್ಷ ರೂಪಾಯಿ ನಗದು, ವಿದೇಶಿ ಕರೆನ್ಸಿಗಳು, ಆಭರಣಗಳು, ದುಬಾರಿ ವಾಚ್ ಗಳು ಮತ್ತು ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿವೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.