ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳಿಗೆ ಪಬ್ಬೊಳಗೆ ಪವೇಶಿಸಲು ಅನುವು ಮಾಡಿಕೊಟ್ಟ ಪಬ್ ಮಾಲೀಕರಿಗೆ ಹೈದರಾಬಾದ್ ಪೊಲೀಸ್ ಕೇಸೊಂದನ್ನು ದಾಖಲಿಸಿದ್ದಾರೆ.
ಎಂಟು ವರ್ಷದ ಹುಡುಗಿಯೊಬ್ಬಳು, ಪಬ್ ಒಳಕ್ಕೆ ಇತರರೊಂದಿಗೆ ಕುಣಿಯುತ್ತಿದ್ದ ವಿಡಿಯೋ ಒಂದು ವೈರಲ್ ಆಗಿದ್ದು, ಇದರ ಆಧಾರದ ಮೇಲೆ ಪೊಲೀಸರು ಕೇಸ್ ಹಾಕಿದ್ದಾರೆ ಎನ್ನಲಾಗಿದೆ.
ವಿಮಾನ ಕಟ್ಟಡಕ್ಕೆ ಅಪ್ಪಳಿಸಿ ನಾಲ್ವರ ದುರಂತ ಸಾವು
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಾಕಿದ್ದ ನೆಟ್ಟಿಗರು, ಹೈದರಾಬಾದ್ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಮಾಡಿ, ಭಾನುವಾರ ರಾತ್ರಿ ನಡೆದ ಘಟನೆಯಾಗಿದ್ದು, ಸೆಕ್ಷನ್ 188 ಅಡಿಯಲ್ಲಿ ಕೇಸ್ ಧಾಖಲಿಸಿದ್ದಾರೆ ಹಾಗು ಪಬ್ ಮಾಲೀಕರ ಮೇಲೆ ಕ್ರಮ ಕೈಗೊಂಡಿದ್ದಾರೆ. ಇದು ಗಚ್ಚಿಬೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದೆ