alex Certify ಹಾರಾಟದ ವೇಳೆಯಲ್ಲೇ ಆಫ್ ಆಯ್ತು ಇಂಜಿನ್: ಸುಟ್ಟು ಕರಕಲಾಯ್ತು ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ವಿಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರಾಟದ ವೇಳೆಯಲ್ಲೇ ಆಫ್ ಆಯ್ತು ಇಂಜಿನ್: ಸುಟ್ಟು ಕರಕಲಾಯ್ತು ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ವಿಮಾನ

ಕವಾಲಾ: ಉತ್ತರ ಗ್ರೀಸ್‌ನಲ್ಲಿ ಕವಾಲಾ ನಗರದ ಬಳಿ ಕಾರ್ಗೋ ವಿಮಾನ ಪತನಗೊಂಡಿದೆ. ಆಂಟೊನೊವ್ 12 ಸರಕು ಸಾಗಣೆ ವಿಮಾನವು ಉತ್ತರ ಗ್ರೀಸ್‌ ನಲ್ಲಿ ಶನಿವಾರ ಪತನಗೊಂಡಿದೆ. ದೇಶದ ಉತ್ತರ ಭಾಗದಲ್ಲಿರುವ ಪೇಲಿಯೊಚೋರಿ ಕವಾಲಾಸ್ ಬಳಿ ಈ ಘಟನೆ ನಡೆದಿದೆ ಎಂದು ಅಥೆನ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಪಘಾತದಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.

ವಿಮಾನವು ಗಾಳಿಯಲ್ಲಿದ್ದಾಗ ಇಂಜಿನ್ ಆಫ್ ಆಗಿ ಬೆಂಕಿ ಹೊತ್ತಿಕೊಂಡಿತು. ಪತನಗೊಂಡಾಗ ಸ್ಥಳೀಯರಿಗೆ ದೊಡ್ಡ ಶಬ್ದ ಕೇಳಿಸಿತು. ಈ ವಿಮಾನವು ಉಕ್ರೇನಿಯನ್ ಕಂಪನಿಯ ಒಡೆತನದಲ್ಲಿದೆ. ಯುದ್ಧಪೀಡಿತ ದೇಶಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿತ್ತು. ಇದನ್ನು ಮೆರಿಡಿಯನ್ ಏರ್ ಕಾರ್ಗೋ ನಿರ್ವಹಿಸುತ್ತಿತ್ತು.

ಕಾರ್ಗೋ ವಿಮಾನವು ಸರ್ಬಿಯಾದಿಂದ ಜೋರ್ಡಾನ್‌ ಗೆ ಪ್ರಯಾಣಿಸುತ್ತಿತ್ತು. ತಾಂತ್ರಿಕ ದೋಷದಿಂದ ವಿಮಾನದ ಪೈಲಟ್ ಸಮೀಪದ ಕವಾಲಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವಂತೆ ಕೋರಿದ್ದರು. ಆದರೆ, ಅಲ್ಲಿಗೆ ತಲುಪುವ ಮುನ್ನವೇ ಅಪಘಾತಕ್ಕೀಡಾಯಿತು. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...