ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಹಾಗೂ 2021ರ ’ವರ್ಷದ ವ್ಯಕ್ತಿ’, ಟೆಸ್ಲಾ ಮತ್ತು ಸ್ಪೇಸ್ಎಲ್ಸ್ ಸಿಇಓ ಎಲಾನ್ ಮಸ್ಕ್ ಸದ್ಯದ ಮಟ್ಟಿಗೆ ಭೂಮಿ ಮೇಲಿರುವ ಅತ್ಯಂತ ಪ್ರಭಾವಿ ಎಂದರೆ ತಪ್ಪಾಗಲಾರದು.
ದೂರದೃಷ್ಟಿಯುಳ್ಳ ಉದ್ಯಮಿಯಾದ ಮಸ್ಕ್, ಭವಿಷ್ಯದ ತಂತ್ರಜ್ಞಾನ ಹಾಗೂ ಉದ್ಯೋಗ ಮಾರುಕಟ್ಟೆಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಎಂದು ಬಹಳ ಚೆನ್ನಾಗಿ ವಿಶ್ಲೇಷಿಸಿ ಹೇಳಬಲ್ಲರು. ಭವಿಷ್ಯದಲ್ಲಿ ಸುಭದ್ರ ಉದ್ಯೋಗಗಳ ಕುರಿತಾಗಿ ಮಸ್ಕ್ ಈಗ ಮಾತನಾಡಿದ್ದಾರೆ.
ಕಳೆದ ಗುರುವಾರ, ಕೃತಕ ಬುದ್ಧಿಮತ್ತೆಯ ವಿಶ್ವ ಸಭೆಯಲ್ಲಿ ಮಾತನಾಡಿದ ಮಸ್ಕ್, “ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಸ್ವಲ್ಪ ಮಟ್ಟಿಗೆ ಅರ್ಥವಿಲ್ಲದಂತೆ ಆಗುವ ಸಂಭವವಿದೆ,” ಎಂದು ಸ್ವಲ್ಪ ಆತಂಕ ಹುಟ್ಟಿಸಿದ್ದಾರೆ.
ಈ ಪರೀಕ್ಷೆ ಮೂಲಕ ಕೇವಲ 90 ನಿಮಿಷಗಳಲ್ಲಿ ಪತ್ತೆಯಾಗುತ್ತೆ ʼಒಮಿಕ್ರಾನ್ʼ
ಯಾಂತ್ರೀಕರಣದಿಂದಾಗಿ ಭವಿಷ್ಯದಲ್ಲಿ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಸ್ಕ್, ಎಐ ತಂತ್ರಾಂಶ ಹಾಗೂ ಮಷೀನ್ಗಳನ್ನು ಅಭಿವೃದ್ಧಿ ಪಡಿಸುವ ಮಂದಿಗೆ ಅಂಥ ಜಗತ್ತಿನಲ್ಲಿ ಒಳ್ಳೆ ಬೇಡಿಕೆ ಇರಲಿದೆ ಎಂದಿದ್ದಾರೆ. ಹೀಗೆ ಮುಂದುವರೆದು ಎಐ ತನ್ನಿಂತಾನೇ ಸಾಫ್ಟ್ವೇರ್ಗಳನ್ನು ಬರೆಯುವ ಕಾರಣ ಸಾಫ್ಟ್ವೇರ್ ತಜ್ಞರಿಗೂ ಉದ್ಯೋಗವಿಲ್ಲದಂತೆ ಆಗಬಹುದು ಎಂದಿದ್ದಾರೆ.
ಉತ್ಪಾದನೆ ಹಾಗೂ ವಿತರಣೆಗಳ ಕೆಲಸಗಳನ್ನು ತಂತ್ರಜ್ಞಾನ ಸಂಪೂರ್ಣವಾಗಿ ನೋಡಿಕೊಳ್ಳಲಿರುವ ಕಾರಣ ಮಾನವರ ಮುಂದಿನ ದಿನಗಳಲ್ಲಿ ಸಮಾಜಗಳಲ್ಲಿ ಮಾನವ ಮಧ್ಯ ಪ್ರವೇಶ ಬೇಕಾಗುತ್ತದೆ ಎಂದ ಮಸ್ಕ್, “ಜನರು ಹಾಗೂ ಇಂಜಿನಿಯರಿಂಗ್ ಅನ್ನು ಒಳಗೊಂಡ ಯಾವುದರ ಮೇಲಾದರೂ ನೀವು ಕೆಲಸ ಮಾಡುತ್ತಿದ್ದರೆ, ಬಹುಶಃ ಅದು ಭವಿಷ್ಯದ ಮೇಲೆ ನೀವು ಮಾಡಬಹುದಾದ ಉತ್ತಮವಾದ ಗಮನವಾಗಿರುತ್ತದೆ,” ಎನ್ನುತ್ತಾರೆ ಮಸ್ಕ್.