ಬೆಂಗಳೂರು: ಕಾರು ಚಾಲಕನೊಬ್ಬ ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಕಾರು ಚಲಾಯಿಸಿ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿದೆ.
ಕಾರೊಂದು ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಹರಿದಿದೆ. ಕಾರು ಚಾಲಕ ಕಾರನ್ನು ನಿಲ್ಲಿಸಬಹುದಿತ್ತು. ಆದರೆ ಹಾಗೆ ಮಾಡದ ಕಾರು ಚಾಲಕ ಕರುವಿನ ಮೇಲೆಯೇ ಕಾರು ಹತ್ತಿಸಿದ್ದಾನೆ. ಕಾರಿನ ಚಕ್ರಕ್ಕೆ ಕರು ಸಿಲುಕಿ ಒದ್ದಾಡುತ್ತಿದ್ದರೂ ಮನುಷತ್ವವನ್ನೂ ಮರೆತ ಚಾಲಕ ಕರುವಿನ ಹೊಟ್ಟೆಯ ಮೇಲೆ ಕಾರು ಹತ್ತಿಸಿ ಕಾರು ಸಮೇತ ಪರಾರಿಯಾಗಿದ್ದಾನೆ.
ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕರುವಿನ ಹೊಟ್ಟೆ, ಕಾಲಿನ ಭಾಗಕ್ಕೆ ಗಂಭಿರಗಾಗಳಾಗಿದ್ದು, ರಸ್ತೆಯಲ್ಲಿಯೇ ಕರು ನರಳಾಟ ನಡೆಸಿದೆ. ಕಾರು ಚಾಲಕನ ಕ್ರೌರ್ಯದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.