
ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆದ್ದಾರಿಯಲ್ಲಿ ಪರ್ವತವೊಂದು ಕುಸಿದು, ಅದರ ನಡುವೆ ಕಾರು ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕೊನೆಯಲ್ಲಿ ಅವಶೇಷ ಕಾಣಿಸುತ್ತದೆ. ಆರಂಭದಲ್ಲಿ ಕಾರು ಸುರಂಗದಿಂದ ವೇಗವಾಗಿ ದಾಟಿ ಹೋಗುವುದನ್ನು ಕಾಣಬಹುದು.
ಕಾರು ಆ ಸ್ಥಳ ದಾಟುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಮಣ್ಣಿನ ರಾಶಿ ಜರಿದು ಆಕಾಶದೆತ್ತರಕ್ಕೆ ಧೂಳು ಏಳುತ್ತದೆ. ಜುಲೈ 5ರಂದು ಸಂಭವಿಸಿದ ಘಟನೆಯ ವಿಡಿಯೊ ನೋಡುಗರನ್ನು ಅಚ್ಚರಿಗೆ ದೂಡಿದೆ.
ಭೂ ಕುಸಿತದಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂಬ ಶೀರ್ಷಿಕೆಯೊಂದಿಗೆ ಆ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ. ಈ ಘಟನೆಯು ಕಳೆದ ಕೆಲವು ವಾರಗಳಿಂದ ಚೀನಾ ಎದುರಿಸುತ್ತಿರುವ ಕೆಟ್ಟ ಹವಾಮಾನದ ಪರಿಣಾಮವಾಗಿರಬಹುದು ಎಂದು ಅಕ್ಯುವೆದರ್ ವರದಿ ಮಾಡಿದೆ.