alex Certify ಮಧ್ಯರಾತ್ರಿ ಕೆರೆ ಏರಿ ಮೇಲೆ ಸುಟ್ಟು ಕರಕಲಾದ ಕಾರ್ ನಲ್ಲಿ ಏನಿತ್ತು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯರಾತ್ರಿ ಕೆರೆ ಏರಿ ಮೇಲೆ ಸುಟ್ಟು ಕರಕಲಾದ ಕಾರ್ ನಲ್ಲಿ ಏನಿತ್ತು ಗೊತ್ತಾ…?

ಹಾಸನ: ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದ ಬಳಿ ಕಾರ್ ಸುಟ್ಟು ಕರಕಲಾಗಿದ್ದು ಅದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕಂಡು ಬಂದಿದೆ. ಸೋಮವಾರ ಮಧ್ಯರಾತ್ರಿ ಬೆಳವಾಡಿ ಕೆರೆ ಏರಿ ಮೇಲೆ ಕಾರ್ ಗೆ ಬೆಂಕಿ ತಗುಲಿ ವ್ಯಕ್ತಿಯೊಬ್ಬರು ಕಾರ್ ಸಮೇತ ಸುಟ್ಟು ಕರಕಲಾಗಿದ್ದಾರೆ.

ಕಾರ್ ಹಿಂಬದಿಯ ಸೀಟಿನ ಕೆಳಗೆ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೇ ಎನ್ನುವುದು ಗೊತ್ತಾಗಿಲ್ಲ. ಸ್ಥಳಕ್ಕೆ ಕೊಣನೂರು ಠಾಣೆ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...