ಮಂಡ್ಯ : ಮಂಡ್ಯ ವಿಸಿ ನಾಲೆಗೆ 18 ಅಡಿ ಆಳದ ನಾಲೆಗೆ ಕಾರೊಂದು ಉರುಳಿ ಬಿದ್ದಿದ್ದು, ಚಾಲಕ ನಾಪತ್ತೆಯಾಗಿದ್ದಾನೆ. ಮಂಡ್ಯದ ತಿಬ್ಬನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ನಾಲೆಗೆ ಉರುಳಿ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಘಟನೆ ನಡೆದು ಸುಮಾರು ಹೊತ್ತಾದರೂ ಇನ್ನೂ ಕಾರು ಚಾಲಕನ ಮೃತದೇಹ ಮಾತ್ರ ಪತ್ತೆಯಾಗಿಲ್ಲ.
ಲೋಕೇಶ್ ಎಂಬಾತ ಕಾರು ಚಲಿಸಿಕೊಂಡು ಬರುತ್ತಿದ್ದನು. ಆದರೆ, ಕಾರು ನಿಯಂತ್ರಣ ತಪ್ಪಿದ್ದು, ಪಕ್ಕದಲ್ಲಿಯೇ ತುಂಬಿ ಹರಿಯುತ್ತಿದ್ದ ನಾಲೆಯೊಳಗೆ ಬಿದ್ದಿದೆ. ಕಾಲುವೆಗೆ ತಡೆಗೊಡೆ ಇಲ್ಲದ ಕಾರಣ ಕಾರು ಕಾಲುವೆಗೆ ಬಿದ್ದಿದೆ. ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಅಪಘಾತ ನಡೆಯುತ್ತಿದ್ದಂತೆ ಕಾರಿನ ಕಿಟಕಿ ಗಾಜು ಒಡೆದು ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾನೆ. ನಾಪತ್ತೆಯಾದ ಚಾಲಕನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಲೋಕೇಶ್ (45) ಮಂಡ್ಯ ತಾಲೂಕಿನ ಶಿವಹಳ್ಳಿ ಗ್ರಾಮದವರಾಗಿದ್ದು, ಶಿವಹಳ್ಳಿಯಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈಜುಗಾರರ ಸಹಾಯದಿಂದ ಕಾರು ಮೇಲೆತ್ತಲಾಗುತ್ತಿದ್ದು, ಮೃತ ಲೋಕೇಶ್ ದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.