alex Certify ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಹೊತ್ತಿ ಉರಿದ ಕಾರು; ಭಾರಿ ಟ್ರಾಫಿಕ್ ನಿಂದ ಸಂಚಾರ ಅಸ್ತವ್ಯಸ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಹೊತ್ತಿ ಉರಿದ ಕಾರು; ಭಾರಿ ಟ್ರಾಫಿಕ್ ನಿಂದ ಸಂಚಾರ ಅಸ್ತವ್ಯಸ್ತ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಹೆದ್ದಾರಿಯಲ್ಲಿ ಟ್ರಾಫಿಕ್ ಅಸ್ತವ್ಯಸ್ತವಾದ ಘಟನೆ ನಡೆದಿದೆ. ಖಲಾಪುರ್ ಟೋಲ್ ಪ್ಲಾಜಾದಿಂದ ಖಂಡಾಲಾವರೆಗಿನ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದೆ.

ಸುದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಸಿಗರ ನೂಕುನುಗ್ಗಲು ಉಂಟಾಗಿದೆ. ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಈ ಘಟನೆಯಿಂದ ತೊಂದರೆಯಾಗಿದೆ. ಶನಿವಾರದಂದು, ಮುಂಬೈ ಮತ್ತು ಲೋನಾವಾಲಾ ನಡುವೆ ಟ್ರಾಫಿಕ್ ದಟ್ಟಣೆ ಕಂಡು ಬಂತು. ಲೋನಾವಾಲಾದಲ್ಲಿ 10 ಕಿಲೋಮೀಟರ್‌ಗಳವರೆಗೆ ಉದ್ದವಾದ ವಾಹನಗಳ ಸಾಲುಗಳು ಕಂಡುಬಂದವು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಟ್ರಕ್ ವೊಂದು 11 ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ನಡೆದ ಅಪಘಾತ ಇದಾಗಿದೆ. ಮುಂಬೈನಿಂದ 75 ಕಿಲೋಮೀಟರ್ ದೂರದಲ್ಲಿರುವ ರಾಯಗಢ ಜಿಲ್ಲೆಯ ಖೋಪೋಲಿ ಬಳಿ ಭಾನುವಾರ ಮಧ್ಯಾಹ್ನ 12:55 ರ ಸುಮಾರಿಗೆ ಈ ಘಟನೆ ನಡೆದಿದೆ.

— Sudipto Basu (@SudiptoBasu10) April 30, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...