
ಸುದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಸಿಗರ ನೂಕುನುಗ್ಗಲು ಉಂಟಾಗಿದೆ. ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಈ ಘಟನೆಯಿಂದ ತೊಂದರೆಯಾಗಿದೆ. ಶನಿವಾರದಂದು, ಮುಂಬೈ ಮತ್ತು ಲೋನಾವಾಲಾ ನಡುವೆ ಟ್ರಾಫಿಕ್ ದಟ್ಟಣೆ ಕಂಡು ಬಂತು. ಲೋನಾವಾಲಾದಲ್ಲಿ 10 ಕಿಲೋಮೀಟರ್ಗಳವರೆಗೆ ಉದ್ದವಾದ ವಾಹನಗಳ ಸಾಲುಗಳು ಕಂಡುಬಂದವು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.
ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಗುರುವಾರ ಟ್ರಕ್ ವೊಂದು 11 ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ನಡೆದ ಅಪಘಾತ ಇದಾಗಿದೆ. ಮುಂಬೈನಿಂದ 75 ಕಿಲೋಮೀಟರ್ ದೂರದಲ್ಲಿರುವ ರಾಯಗಢ ಜಿಲ್ಲೆಯ ಖೋಪೋಲಿ ಬಳಿ ಭಾನುವಾರ ಮಧ್ಯಾಹ್ನ 12:55 ರ ಸುಮಾರಿಗೆ ಈ ಘಟನೆ ನಡೆದಿದೆ.