alex Certify ಧೋನಿ ನಾಯಕತ್ವದಲ್ಲಿಂದು ಸಿಎಸ್​ಕೆ 200ನೇ ಪಂದ್ಯ….! ಹೀಗಿದೆ ನೋಡಿ ಐಪಿಎಲ್​ನಲ್ಲಿ ಧೋನಿ ನಡೆದು ಬಂದ ಹಾದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ನಾಯಕತ್ವದಲ್ಲಿಂದು ಸಿಎಸ್​ಕೆ 200ನೇ ಪಂದ್ಯ….! ಹೀಗಿದೆ ನೋಡಿ ಐಪಿಎಲ್​ನಲ್ಲಿ ಧೋನಿ ನಡೆದು ಬಂದ ಹಾದಿ

ಟೀಂ ಇಂಡಿಯಾ ಶ್ರೇಷ್ಟ ಕ್ಯಾಪ್ಟನ್​​ಗಳಲ್ಲಿ ಮಹೇಂದ್ರ ಸಿಂಗ್​ ಧೋನಿ ಕೂಡ ಒಬ್ಬರು ಎಂದು ಹೇಳಿದ್ರೆ ತಪ್ಪಾಗಲಾರದು. ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್​ ಧೋನಿ ತಮ್ಮ ವೃತ್ತಿ ಜೀವನದ ಮತ್ತೊಂದು ಮೈಲಿಗಲ್ಲನ್ನು ಇಂದು ಸಾಧಿಸಲಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ಇಂದು ರಾಜಸ್ಥಾನ ರಾಯಲ್ಸ್​ ತಂಡವನ್ನು ಎದುರಿಸಲಿದೆ. ಈ ಪಂದ್ಯದ ಮೂಲಕ ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ನಲ್ಲಿ 200ನೇ ಬಾರಿ ಸಿಎಸ್​ಕೆ ತಂಡವನ್ನು ಮುನ್ನಡೆಸಿದಂತೆ ಆಗಲಿದೆ.

ಐಪಿಎಲ್​ ಟಿ 20 ಸರಣಿಯಲ್ಲಿ ಯಶಸ್ವಿ ನಾಯಕ ಎಂದೆನಿಸಿಕೊಂಡಿರುವ ಮಹೇಂದ್ರ ಸಿಂಗ್​ ಧೋನಿ ತಂಡಕ್ಕೆ ಮೂರು ಬಾರಿ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಬಾರಿಯ ಐಪಿಎಲ್​​ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 11 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆದ್ದು ಮೊದಲ ಸ್ಥಾನದಲ್ಲಿದೆ.

ಇಂದು ಅಬುದಾಬಿಯ ಶೇಕ್​ ಜಾಯೇದ್​ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಎದುರು ಕಣಕ್ಕಿಳಿಯಲಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಗೆಲುವಿನ ನಿರೀಕ್ಷೆಯಲ್ಲಿದೆ. ಇದು ಧೋನಿ ನಾಯಕತ್ವದಲ್ಲಿ ಸಿಎಸ್​ಕೆಯ 200ನೇ ಪಂದ್ಯವಾಗಿರುವುದರಿಂದ ಅಭಿಮಾನಿಗಳಲ್ಲಿ ಇನ್ನಷ್ಟು ಕಾತುರ ಮನೆ ಮಾಡಿದೆ.

ಧೋನಿ ನಾಯಕತ್ವದಲ್ಲಿ 199 ಪಂದ್ಯಗಳನ್ನು ಆಡಿರುವ ಸಿಎಸ್​ಕೆ ತಂಡವು 119 ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ. 79 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದರೆ ಒಂದು ಪಂದ್ಯವು ಯಾವುದೇ ಫಲಿತಾಂಶವಿಲ್ಲದೇ ಕೊನೆಗೊಂಡಿದೆ.

ಗೆಲುವಿನ ಪ್ರಮಾಣದಲ್ಲಿ ಸಿಎಸ್​​ಕೆ ತಂಡವು 60.10 ಪ್ರತಿಶತ ಪಂದ್ಯಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದೆ.
ಇಂಡಿಯನ್ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲಿ ಧೋನಿ ಅತ್ಯುತ್ತಮ ನಾಯಕ ಎನಿಸಿದ್ದು ಗೆಲುವಿನ ಶೇಕಡಾವಾರು ಪ್ರಮಾಣ 61.10 ಆಗಿದೆ. ಎರಡನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ (59.52) ಇದ್ದಾರೆ. ಸಚಿನ್​ ತೆಂಡೂಲ್ಕರ್​ (58.82), ಶೇನ್​ ವಾರ್ನ್​(55.45) ಹಾಗೂ ಗೌತಮ್​ ಗಂಭೀರ್​(55.42) ಐದನೇ ಸ್ಥಾನವನ್ನು ಪಡೆದಿದ್ದಾರೆ.

2008ರಲ್ಲಿ ಐಪಿಎಲ್​ ಆರಂಭವಾದಾಗಿನಿಂದಲೂ ಬಹುತೇಕ ಸಿಎಸ್​ಕೆ ತಂಡದ ನಾಯಕರಾಗಿದ್ದಾರೆ. ಐಪಿಎಲ್​​ ಬೆಟ್ಟಿಂಗ್​ ಆರೋಪದಲ್ಲಿ ಸಿಎಸ್​ಕೆ ತಂಡ ಬ್ಯಾನ್​ ಆಗಿದ್ದ ವೇಳೆ ಧೋನಿ ರೈಸಿಂಗ್​ ಪುಣೆ ಸೂಪರ್​ಜೈಂಟ್​ ತಂಡ ಸೇರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...