ಟೋಕಿಯೋ ಒಲಿಂಪಿಕ್ನಲ್ಲಿ ಭಾರತವು ಪದಕದ ಬೇಟೆಯನ್ನು ಮುಂದುವರಿಸಿದೆ. ಸ್ಪೇನ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಭಾರತೀಯ ಹಾಕಿ ತಂಡ ಪದಕದ ಆಸೆಯನ್ನು ಜೀವಂತವಾಗಿರಿಸಿದೆ. ಹಾಕಿ ತಂಡದ ನಾಯಕ ಮನಪ್ರೀತ್ ಸಿಂಗ್, ಮನ್ದೀಪ್ ಸಿಂಗ್ ಹಾಗೂ ಹಾರ್ದಿಕ್ ಸಿಂಗ್ ಈ ಬಾರಿ ಪದಕ ಗೆದ್ದರೆ ಕುಟುಂಬಸ್ಥರಿಗೆ ಭರ್ಜರಿ ಉಡುಗೊರೆಗಳನ್ನ ನೀಡುವ ಭರವಸೆ ನೀಡಿದ್ದಾರಂತೆ.
ಒಲಿಂಪಿಕ್ನಲ್ಲಿ ಚಿನ್ನದ ಪದಕವನ್ನ ಸಂಪಾದಿಸುವಲ್ಲಿ ಭಾರತದ ಹಾಕಿ ತಂಡ ಯಶಸ್ವಿಯಾದಲ್ಲಿ ಮನಪ್ರೀತ್ ಸಿಂಗ್ ಪತ್ನಿಗೆ ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡೋದಾಗಿ ಹೇಳಿದ್ದಾರಂತೆ. ಅಂದಹಾಗೆ ಮನ್ಪ್ರೀತ್ ಸಿಂಗ್ ತಮ್ಮ ವಿವಾಹ ಸಂದರ್ಭದಲ್ಲೇ ಪತ್ನಿಗೆ ಈ ಆಶ್ವಾಸನೆ ನೀಡಿದ್ದರಂತೆ.
ಮನ್ಪ್ರೀತ್ ತಮ್ಮ ಪತ್ನಿ ಇಲಿಯವರನ್ನ ಮೊದಲ ಬಾರಿಗೆ 2012ರ ಸುಲ್ತಾನ್ ಜೋಹರ್ ಕಪ್ ಪಂದ್ಯಾವಳಿಯಲ್ಲಿ ಭೇಟಿಯಾಗಿದ್ದರಂತೆ. ಈ ಸಮಯದಲ್ಲಿ ಮನ್ಪ್ರೀತ್ ಭಾರತದ ಕಿರಿಯ ಆಟಗಾರರ ತಂಡದ ನಾಯಕರಾಗಿದ್ದರು.
ಇಲಿಯವರು ಈ ಪಂದ್ಯವನ್ನ ವೀಕ್ಷಿಸಲು ಆಗಮಿಸಿದ್ದರು. ಇದಾದ ಬಳಿಕ ಇವರ ನಡುವೆ ಪ್ರೇಮಾಂಕುರವಾಗಿತ್ತು ಹಾಗೂ ಈ ಜೋಡಿ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಅಲ್ಲೇ ಹಾಕಿ ಆಟಗಾರ ಮನ್ಪ್ರೀತ್ ಸಿಂಗ್ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಒಲಿಂಪಿಕ್ನಲ್ಲಿ ತಾವು ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರೆ ಪತ್ನಿಗೆ ಮರ್ಸಿಡಿಸ್ ಕಾರನ್ನ ಗಿಫ್ಟ್ ಆಗಿ ನೀಡುವ ಪ್ರತಿಜ್ಞೆ ಮಾಡಿದ್ದರು.
ಇತ್ತ ಹಾರ್ದಿಕ್ ಸಿಂಗ್ ತಾವು ಒಲಿಂಪಿಕ್ನಲ್ಲಿ ಚಿನ್ನದ ಪದಕವನ್ನ ಗೆದ್ದ ದಿನ ತಮ್ಮ ಗಾಡಿಗೆ ಒಲಿಂಪಿಕ್ ರಿಂಗ್ನ ಮಾದರಿಯನ್ನ ಅಳವಡಿಸೋದಾಗಿ ಸೋದರನ ಬಳಿ ಹೇಳಿಕೊಂಡಿದ್ದಾರಂತೆ. ಇವರ ತಾಯಿ ಕೂಡ ಕಮಲ್ಜೀತ್ ಹಾಗೂ ಹಾರ್ದಿಕ್ಗಾಗಿ ಚಿನ್ನದ ಸರವನ್ನ ಖರೀದಿ ಮಾಡಿದ್ದು ಟೋಕಿಯೋದಿಂದ ವಾಪಸ್ಸಾಗುತ್ತಿದ್ದಂತೆ ಅವರ ಕೊರಳಿಗೆ ತೊಡಿಸುವ ಅಭಿಲಾಷೆ ಹೊಂದಿದ್ದಾರೆ.