ಪಾರ್ಟಿ ಮೋಜು ಮಸ್ತಿ ಅಂದ ಮೇಲೆ ಅಲ್ಲಿ ಮದ್ಯಪಾನ ಇದ್ದೇ ಇರುತ್ತೆ. ಸಂಭ್ರಮಕ್ಕೆ ಎಣ್ಣೆ ಕುಡಿದ ಮೇಲೆ ಹ್ಯಾಂಗ್ ಓವರ್ ಇಳಿಯೋಕೆ ಏನು ಮಾಡಬೇಕು ಎಂಬ ಗೊಂದಲ ಅನೇಕರಲ್ಲಿದೆ. ಇದಕ್ಕೆ ಕೆಲ ಮನೆಮದ್ದುಗಳು ಇಲ್ಲಿವೆ.
ಆಪಲ್ ಸಿಡೆರ್ ವಿನೆಗರ್ ಹಾಗೂ ಶುಂಠಿ : ಮದ್ಯಪಾನ ಮಾಡಿದ ಬಳಿಕ ಹೊಟ್ಟೆ ಉರಿ, ವಾಂತಿ ಬಂದ ಅನುಭವ ಉಂಟಾಗ್ತಿದ್ರೆ ನೀವು ಈ ಮನೆಮದ್ದನ್ನ ಟ್ರೈ ಮಾಡಬಹುದು. ತಲಾ 5 ಎಂಎಲ್ ಆಪಲ್ ಸೀಡರ್ ವಿನೆಗರ್, ನಿಂಬು ರಸ, ಶುಂಠಿ ರಸ, 1 ಚಮಚ ಜೇನುತುಪ್ಪ ಹಾಗೂ 200 ಎಂಎಲ್ ನೀರನ್ನ ಸೇರಿಸಿ ಕುಡಿಯೋದ್ರಿಂದ ನಿಮ್ಮ ಸಮಸ್ಯೆ ಪರಿಹಾರವಾಗಲಿದೆ.
ಬಾಳೆಹಣ್ಣಿನ ಮಿಲ್ಕ್ಶೇಕ್ : ಅತಿಯಾದ ಮದ್ಯ ಸೇವನೆಯಿಂದ ಡಿಹೈಡ್ರೇಷನ್ ಸಮಸ್ಯೆ ಹಾಗೂ ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಶಿಯಂ ಕೊರತೆಗೆ ಕಾರಣವಾಗುತ್ತೆ. ಇದಕ್ಕೆ ನೀವು 1 ಬಾಳೆಹಣ್ಣು, ಹಸುವಿನ ಹಾಲು, ಜೇನುತುಪ್ಪ ಳಿಸಿ ಮಿಲ್ಕ್ ಶೇಕ್ ಮಾಡಿ ಕುಡಿಯಬಹುದಾಗಿದೆ. ಬಾಳೆಹಣ್ಣನ್ನ ಹಾಲಿನ ಜೊತೆ ಬ್ಲೆಂಡ್ ಮಾಡಿ ಇದಕ್ಕೆ ಜೇನುತುಪ್ಪವನ್ನ ಸೇರಿಸಿ ಕುಡಿಬೇಕು.
ಎಳನೀರು : ಮದ್ಯಪಾನದಿಂದ ಉಂಟಾಗುವ ಹ್ಯಾಂಗ್ ಓವರ್ಗೆ ಎಳನೀರು ಉತ್ತಮ ಔಷಧಿಯಾಗಿದೆ. 2 ಕಪ್ ತೆಂಗಿನ ಕಾಯಿಯ ನೀರು, 1 ಕಪ್ ಎಳೆನೀರು, 1/2 ಕಪ್ ಹಾಲಿಗೆ ಸಕ್ಕರೆ ಹಾಕಿ ಸ್ಮೂದಿ ತಯಾರಿಸಿ ಕುಡಿಯಬಹುದು.