alex Certify ಗುಡ್ ನ್ಯೂಸ್: ಕ್ಯಾನ್ಸರ್ ನಿವಾರಣೆಗೆ ಹಿತ್ತಲ ಗಿಡವೇ ಸಂಜೀವಿನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: ಕ್ಯಾನ್ಸರ್ ನಿವಾರಣೆಗೆ ಹಿತ್ತಲ ಗಿಡವೇ ಸಂಜೀವಿನಿ

ಕ್ಯಾನ್ಸರ್ ನಿವಾರಕ ಔಷಧದ ಮೂಲ ಎಂದು ಹೇಳಲಾಗುವ ಪ್ರಕ್ರಿಯೆಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪೇಟೆಂಟ್ ದೊರೆತಿದೆ. ಹಡೆಬಳ್ಳಿ (Cyclia peltata) ಶುದ್ಧೀಕರಣ ಪ್ರಕ್ರಿಯೆಗೆ ಮಂಗಳೂರು ವಿವಿ ಪೇಟೆಂಟ್ ಪಡೆದುಕೊಂಡಿದೆ. ಈ ಹಡೆಬಳ್ಳಿಯಿಂದ ಕ್ಯಾನ್ಸರ್ ನಿವಾರಕ ಔಷಧ ತಯಾರಿಸಬಹುದು ಎಂದು ಹೇಳಲಾಗಿದೆ.

ದಕ್ಷಿಣ ಕನ್ನಡ ಭಾಗದ ಮನೆಯ ಹಿತ್ತಲುಗಳಲ್ಲಿ, ಅರಣ್ಯ ಪ್ರದೇಶದಲ್ಲಿ ಹಡೆಬಳ್ಳಿ ಕಂಡುಬರುತ್ತವೆ. ಈ ಗಿಡದ ಟಿಶ್ಯೂ ಕಲ್ಚರ್ ಮೂಲಕ ರಾಸಾಯನಿಕಗಳ ಸಂಶೋಧನೆ ಮಾಡುವಾಗ ಟೆಂಟ್ರಾಡೈನ್ ಎನ್ನುವ ಅಂಶ ಇರುವುದು ಗೊತ್ತಾಗಿದೆ. ಚೀನಾದಲ್ಲಿ ಸ್ಟೆಫಾನಿಯ ಟೆಂಟ್ರಾಂಡ್ರ ಗಿಡದ ಶುದ್ಧೀಕರಣ ಕ್ಯಾನ್ಸರ್ ಶಮನ ಮಾಡುತ್ತದೆ ಎನ್ನುವುದನ್ನು ವಿಜ್ಞಾನಿಗಳು ಸಾಬೀತು ಮಾಡಿದ್ದು, ಭಾರತದಲ್ಲಿ ಇದರ ಮೇಲೆ ಯಾರೂ ಸಂಶೋಧನೆ ಮಾಡಿರಲಿಲ್ಲ.

ಮಂಗಳೂರು ವಿವಿ ವಿಜ್ಞಾನಿಗಳು ಈ ಗಿಡವನ್ನು ಸಂಶೋಧನೆಗೆ ಒಳಪಡಿಸಿ ಕ್ಯಾನ್ಸರ್ ನಿರೋಧಕ ಚಟುವಟಿಕೆಯ ಕುರಿತಾಗಿ ಪರೀಕ್ಷೆ ನಡೆಸಿದ್ದಾರೆ. ಪ್ರಯೋಗಾಲಯದಲ್ಲಿ ನಡೆದ ಪ್ಯೂರಿಟಿ ಪರೀಕ್ಷೆಯಲ್ಲಿ ಶೇಕಡ 98 ರಷ್ಟು ಪ್ಯೂರಿಟಿ ಎನ್ನುವುದು ಗೊತ್ತಾಗಿದೆ. ಇದು ಸುಲಭವಾಗಿ ಬೇರೆ ಕಾಂಪ್ಲೆಕ್ಸ್ ಮಿಕ್ಸ್ ಚರ್ ನಿಂದ ಬೇರ್ಪಡಿಸಲು ಸಾಧ್ಯವಿದೆ ಎನ್ನಲಾಗಿದೆ.

ಈ ಗಿಡವನ್ನು ಅರೆದು ಹಣೆಗೆ ಹಚ್ಚಿದರೆ ಶೀತ, ಜ್ವರ, ಮಧುಮೇಹ, ಹೃದಯ ಶುದ್ದಿ ಮುಂತಾದ ರೋಗ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಗ್ರಾಮೀಣ ಭಾಗದ ಜನರಲ್ಲಿದೆ ಎಂದು ಹೇಳಲಾಗಿದೆ.

ಮಂಗಳೂರು ವಿವಿ ಸಸ್ಯಶಾಸ್ತ್ರ ವಿಭಾಗದ ಸಂಶೋಧಕರಾಗಿದ್ದ ಪ್ರೊ. ಕೆ.ಆರ್. ಚಂದ್ರಶೇಖರ್(ನಿವೃತ್ತಿ ನಂತರ ಯೆನೆಪೋಯ ವಿವಿಯಲ್ಲಿ ವಿಜ್ಞಾನಿ ಹಾಗೂ ಆಂತರಿಕ ಗುಣಮಟ್ಟ ಖಾತರಿ ಸಲಹೆಗಾರರಾಗಿದ್ದಾರೆ) ಪ್ರೊ. ಭಾಗ್ಯ ನೆಕ್ರಕಲಾಯ(ಯೆನೆಪೋಯ ವಿವಿ ಸಂಶೋಧಧಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ) ಇವರು ನಡೆಸಿದ ‘ಎ ಪ್ರೊಸೆಸ್ ಫಾರ್ ದ ಎಕ್ಸ್ ಟ್ರಾಕ್ಟರ್ ಅಂಡ್ ಫ್ಯೂರಿಫಿಕೇಷನ್ ಆಫ್ ಟೆಂಟ್ರಾಂಡೈನ್’ ಸಂಶೋಧನಾ ಪ್ರಕ್ರಿಯೆಗೆ ಪೇಟೆಂಟ್ ಲಭಿಸಿದೆ. ಈ ಪ್ರಕ್ರಿಯೆ ಕ್ಯಾನ್ಸರ್ ನಿವಾರಕ ಔಷಧ ಮೂಲವೆಂದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...