alex Certify 10 ಕಿಮೀ ಜಾಗಿಂಗ್​ ಮಾಡುವಾಗಲೇ ಜಗ್ಲಿಂಗ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ಕಿಮೀ ಜಾಗಿಂಗ್​ ಮಾಡುವಾಗಲೇ ಜಗ್ಲಿಂಗ್….!

ಊಹಿಸಲು ಸಾಧ್ಯವಾಗದ ಅನೇಕ ವಿಷಯಗಳಲ್ಲಿ ವಿಶ್ವದಾಖಲೆಗಳನ್ನು ಬರೆದವರಿದ್ದಾರೆ. ಆದರೆ ಇತ್ತೀಚೆಗಷ್ಟೇ ಎರಡು ಚಟುವಟಿಕೆಗಳನ್ನು ಒಟ್ಟಿಗೆ ನಡೆಸಿ ದಾಖಲೆ ಮುರಿಯುವ ಅಪರೂಪದ ಪ್ರಯತ್ನವೊಂದು ಅನಧಿಕೃತವಾಗಿ ನಡೆದಿದೆ.

ಮೈಕೆಲ್​ ರ್ಬಗೆರಾನ್​ ಎಂಬವರು “ಜಗ್ಲಿಂಗ್​ ಮಾಡುತ್ತಾ ಹತ್ತು ಕಿಲೋಮೀಟರ್​ಗಳನ್ನು 34 ನಿಮಿಷ ಮತ್ತು 47 ಸೆಕೆಂಡುಗಳಲ್ಲಿ’ ಓಡಿ ವಿಶ್ವದಾಖಲೆ ಪುಸ್ತಕದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಲು ಪ್ರಯತ್ನಿಸಿದ್ದಾರೆ.

ಕೆನಡಾದ ಪ್ರಿನ್ಸ್​ ಎಡ್ವರ್ಡ್​ ದ್ವೀಪದ ನಿವಾಸಿ ವೇಗವಾಗಿ ಹತ್ತು ಕಿಲೋಮೀಟರ್​ ಜಾಗಿಂಗ್​ ಮಾಡಿದ ದಾಖಲೆಯನ್ನು ಮಾಡುವ ಪ್ರಯತ್ನವನ್ನು ಪ್ರದರ್ಶಿಸಿದ್ದಾರೆ.

ಗಿನ್ನೆಸ್​ ವರ್ಲ್ಡ್​ ರೆಕಾರ್ಡ್‌ನ ಅಧಿಕೃತ ಸೈಟ್​ನ ಪ್ರಕಾರ, ಕೆನಡಾದ ಟೊರೊಂಟೊ ನಿವಾಸಿಯಾಗಿರುವ ಕಪ್ರಾಲ್​ 2006 ರ ಸೆ.10ರಂದು ಜಗ್ಲಿಂಗ್​ ಮಾಡುತ್ತಾ 10 ಕಿಮೀ ಜಾಗಿಂಗ್​ ಮಾಡಿ ವಿಶ್ವದಾಖಲೆ ಮಾಡಿದ್ದರು. ಲಾಂಗ್​ ಬೋಟ್​ ಟೊರೊಂಟೊ ಐಲ್ಯಾಂಡ್​ ರನ್​ನಲ್ಲಿ ಕಪ್ರಾಲ್​ 3 ಬೀನ್​ ಬ್ಯಾಗ್​ಗಳನ್ನು 36 ನಿಮಿಷ ಮತ್ತು 27 ಸೆಕೆಂಡುಗಳಲ್ಲಿ ಬೀಳಿಸದೆ ದಾಖಲೆ ಬರೆದಿದ್ದರು.

ಮ‌ತ್ತೆ ಸಿಕ್ತು ಜನಸಂದಣಿಯಲ್ಲಿ ಕಳೆದು ಹೋದ ಯುವತಿ ಮೊಬೈಲ್…!

2018 ರಲ್ಲಿ ಮೈಕೆಲ್​ ಅದೇ ದಾಖಲೆಯನ್ನು ಮುರಿಯಲು ಪ್ರಯತ್ನಿಸಿ 36 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮುಗಿಸಿದ್ದರು, ಆದರೆ ತಾಂತ್ರಿಕ ಕಾರಣಕ್ಕೆ ಅನರ್ಹಗೊಳಿಸಲಾಯಿತು.

ಜೋಗ್ಲರ್​ ತನ್ನ ಇತ್ತೀಚಿನ ಸಾಧನೆಯ ಬಗ್ಗೆ ಮತ್ತು 10 ಕಿಮೀ ದೂರದ ಜಾಗಿಂಗ್​ ನಂತರ ನೋವಿನಲ್ಲಿದ್ದರೂ, ತನ್ನ ಸಾಧನೆಯ ಬಗ್ಗೆ “ಸೂಪರ್​ ಹ್ಯಾಪಿ” ಎಂದು ಬಹಿರಂಗಪಡಿಸಿದರು. ಇದನ್ನು ಅಧಿಕೃತವಾಗಿ ದೃಢೀಕರಿಸುವ ಪ್ರಯತ್ನದಲ್ಲಿ, ಇದೀಗ ಈ ಪ್ರಯತ್ನದ ಪುರಾವೆಗಳನ್ನು ಗಿನ್ನೆಸ್​ ವಿಶ್ವ ದಾಖಲೆಗೆ ಸಲ್ಲಿಸಲಾಗುತ್ತಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...